ಬೆಂಗಳೂರು: ಎಸಿಬಿ ಎಂದರೆ ಅಪ್ಪಟ ಕಾಂಗ್ರೆಸ್ ಬ್ಯುರೋ ಅಂತ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದುಕೊಂಡ ಸಚಿವರು, ಎಸಿಬಿ ರಚನೆಯ ಸಂದರ್ಭದಲ್ಲಿಯೇ ನಾವೆಲ್ಲರೂ ಅದರ ಹಿಂದಿನ ದುರಾಲೋಚನೆಯನ್ನು ಊಹಿಸಿದ್ದು ಇಂದು ಪೂರ್ತಿ ನಿಜವಾಗಿದೆ ಎಂದಿದ್ದಾರೆ.
Advertisement
ಯಾವುದೇ ಸರಕಾರ ಲೋಕಾಯುಕ್ತ ಸ್ಥಾನದಲ್ಲಿ ಅಥವಾ ಅದಕ್ಕೆ ಪೂರಕವಾಗಿ ಮತ್ತೊಂದು ಸಂಸ್ಥೆಯನ್ನು ರಚಿಸುವಾಗ ಉದ್ದೇಶ ಮಹತ್ವದ್ದಾಗಿರಬೇಕಿತ್ತು. ಆದರೆ ಚರ್ಚೆಯ ಸಂದರ್ಭದಲ್ಲಿಯೇ ನಾವು ಎಸಿಬಿ ರಚನೆ ಹಿಂದಿನ ಕೆಟ್ಟ ಉದ್ದೇಶದ ಬಗ್ಗೆ ತಿಳಿಸಿದ್ದೆವು. ಇಂದು ಎಸಿಬಿ ರಾಜ್ಯ ಕಾಂಗ್ರೆಸ್ ಸರಕಾರದ ಸೇಡಿನ ರಾಜಕಾರಣದ ಒಂದು ಸಾಧನವಾಗಿಬಿಟ್ಟಿದೆ ಅಂತ ಹೇಳಿದ್ದಾರೆ.
Advertisement
ಈ ಸಂಸ್ಥೆ ಇರುವುದೇ ಆಡಳಿತ ಕಾಂಗ್ರೆಸ್ ಪಕ್ಷದವರಿಗೆ ಯದ್ವಾ ತದ್ವಾ ಸ್ಪೀಡಿನಲ್ಲಿ ಕ್ಲೀನ್ ಚಿಟ್ ಕೊಡುವುದಕ್ಕೆ, ವಿರೋಧ ಪಕ್ಷದವರನ್ನು ಅದರಲ್ಲಿಯೂ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಬೇಕಾದ ರೀತಿಯಲ್ಲಿ ಕೇಸುಗಳನ್ನು ದಾಖಲಿಸಿ, ಬೇಕಾದ ರೀತಿ ಹಿಂಸೆ ಕೊಡಲು ಎಂಬುದು ಸ್ಪಷ್ಟವಾಗಿಬಿಟ್ಟಿದೆ ಅಂದಿದ್ದಾರೆ.
Advertisement
ಕಾಂಗ್ರೆಸ್ ಪಕ್ಷದ ಆದೇಶಕ್ಕೆ ಕುಣಿಯದಿದ್ದರೆ, ಎಸಿಬಿ ಅಧಿಕಾರಿಗಳ ಎತ್ತಂಗಡಿ ಹೇಗೆ ರಾತ್ರೋರಾತ್ರಿ ಆಗುತ್ತದೆ ಎಂಬುದೂ ಈಗ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ. ಎಸಿಬಿ ಇರುವುದೇ ಕಾಂಗ್ರೆಸ್ ಸರ್ಕಾರದ ಆಜ್ಞೆಗಳನ್ನು ಪರಿಪಾಲಿಸಲು. ಎಸಿಬಿ, ಆಡಳಿತ ಕಾಂಗ್ರೆಸ್ ಪಕ್ಷದ ಸಂಘಟನೆಯ ಒಂದು ಘಟಕ ಆಗಿಬಿಟ್ಟಿದೆ ಅಥವಾ ಎಸಿಬಿ ಅಂದರೆ “ಅಪ್ಪಟ ಕಾಂಗ್ರೆಸ್ ಬ್ಯೂರೋ” ಆಗಿದೆ! ಅಂತ ಸಚಿವರು ಅಭಿಪ್ರಾಯಿಸಿದ್ದಾರೆ.
Advertisement