ಬೆಂಗಳೂರು: ಪೊಲೀಸ್ ಠಾಣೆಯಲ್ಲಿಯೇ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ಇನ್ಸ್‌ಪೆಕ್ಟರ್ ಹಾಗೂ ಪೇದೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಬಾಣಸವಾಡಿ ಠಾಣೆಯ ಇನ್ಸ್‌ಪೆಕ್ಟರ್ ಡಿ.ಎಚ್. ಮುನಿಕೃಷ್ಣ ಮತ್ತು ಪೇದೆ ಎಚ್.ಸಿ.ಉಮೇಶ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ಪೊಲೀಸರು. ಸ್ನೂಕರ್ ಆಟ ನಡೆಸುತ್ತಿದ್ದ ಬಾಲರಾಜ್ ಲಂಚ ನೀಡಿದ ಆರೋಪಿ.
Advertisement
ನಡೆದದ್ದು ಏನು?
ಬಾಣಸವಾಡಿಯ ಹೆಚ್‍ಬಿಆರ್ ಲೇಔಟ್‍ನಲ್ಲಿ ಬಾಲರಾಜ್ ಎಂಬವರು ಸ್ನೂಕರ್ ನಡೆಸುತ್ತಿದ್ದರು. ಇದಕ್ಕೆ ಅವಕಾಶ ನೀಡಲು ಪ್ರತಿ ತಿಂಗಳು 1 ಲಕ್ಷ ರೂ. ಕೊಡಬೇಕೆಂದು ಡಿ.ಎಚ್.ಮುನಿಕೃಷ್ಣ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಡ್ವಾನ್ಸ್ ಹಣವಾಗಿ ಬಾಲರಾಜ್ 30 ಸಾವಿರ ರೂ. ನೀಡಲು ಠಾಣೆಗೆ ಬಂದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಣ ಪಡೆಯುವಾಗ ಮುನಿಕೃಷ್ಣನ ಜೊತೆಗಿದ್ದ ಎಚ್.ಸಿ.ಉಮೇಶ್ ಕೂಡ ಇದ್ದರು.
Advertisement
ಬೆಂಗಳೂರು ಎಸಿಬಿ ವಿಭಾಗದ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಹಾಗೂ ಬಾಲಕೃಷ್ಣ ನೇತೃತ್ವದ ತಂಡವು ಖಚಿತ ಮಾಹಿತಿ ಪಡೆದು, ಬಾಣಸವಾಡಿ ಠಾಣೆ ಮೇಲೆ ದಾಳಿ ನಡೆಸಿತ್ತು. ಲಂಚ ಪಡೆಯುತ್ತಿರುವಾಗಲೇ ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರನ್ನು ಎರಡು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv