ಚಾಮರಾಜನಗರ: ರಕ್ತಚಂದನ ಮರವನ್ನು ಕಡಿಯುವ ವಿಷಯದಲ್ಲಿ ಎಸಿಬಿ ವಿಭಾಗದ ಡಿವೈಎಸ್‍ಪಿ, ತಹಶೀಲ್ದಾರ್‌ಗೆ ಬಾಯಿಗೆ ಬಂದಂತೆ ನಿಂದಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ರಕ್ತ ಚಂದನ ಮರ ಕಡಿಯುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಸುದರ್ಶನ್ ಅವರು ಗ್ರಾಮ ಸಹಾಯಕನನ್ನು ಸ್ಥಳಕ್ಕೆ ಪರಿಶೀಲನೆಗೆ ಕಳುಹಿಸಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಪಿ ಪ್ರಸಾದ್ ಅವರು ಸ್ಥಳಕ್ಕೆ ಬಂದ ಗ್ರಾಮ ಸಹಾಯಕರನ್ನು ಕರೆದು ಕ್ಲಾಸ್ ತಗೊಂಡಿದ್ರು. ಅಲ್ಲದೇ ತಹಶೀಲ್ದಾರ್ ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಮರವಿದ್ದ ಜಾಗದ ಪಕ್ಕದಲ್ಲೇ ಚಿಕ್ಕಬಳ್ಳಾಪುರ ಎಸಿಬಿ ಡಿವೈಎಸ್‍ಪಿ ಪಿ ಪ್ರಸಾದ್‍ರ ಜಮೀನು ಇದ್ಯಂತೆ. ಹೀಗಾಗಿ ತಹಶೀಲ್ದಾರ್‌ಗೆ ಪೊಲೀಸ್ ಅಧಿಕಾರಿ ಪ್ರಸಾದ್ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಠಾಣೆಯಲ್ಲಿ ಡಿವೈಎಸ್‍ಪಿ ಪ್ರಸಾದ್ ವಿರುದ್ಧ ತಹಶೀಲ್ದಾರ್ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv