ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ

Public TV
1 Min Read
AC Helmets Traffic Police Gujarat Vadodara

ಗಾಂಧಿನಗರ: ಬಿಸಿಲಿನ ತಾಪಕ್ಕೆ ಬೇಸತ್ತು ಗುಜರಾತ್‍ನ (Gujarat) ವಡೋದರಾ (Vadodara) ಸಂಚಾರಿ ಪೊಲೀಸರು (Traffic Police) ಎಸಿ ಹೆಲ್ಮೆಟ್‍ನ (AC Helmet) ಮೊರೆ ಹೋಗಿದ್ದಾರೆ. ಗುಜರಾತ್‍ನ ಪೊಲೀಸ್ ಇಲಾಖೆ ಸಂಚಾರಿ ಪೊಲೀಸರಿಗೆ ವಿಶೇಷ ಹವಾನಿಯಂತ್ರಿತ ಹೆಲ್ಮೆಟ್‍ಗಳನ್ನು ಪರಿಚಯಿಸಿದೆ.

ಈ ಹೆಲ್ಮೆಟ್ 40-42 ಡಿಗ್ರಿ ಸೆಲ್ಸಿಯಸ್‍ನ ಗರಿಷ್ಠ ತಾಪಮಾನದಲ್ಲಿ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ತಣ್ಣನೆಯ ಅನುಭವ ನೀಡಲಿದೆ. ಈ ಹೆಲ್ಮೆಟ್‍ಗಳನ್ನು ವಿವಿಧ ವಿಶೇಷವಾಗಿ ತಯಾರಿಸಲಾಗಿದೆ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಮುಖವಾಡ ಮತ್ತು ಚಾಜಿರ್ಂಗ್ ಪಾಯಿಂಟ್‍ನ್ನು ಇದು ಹೊಂದಿದೆ. ಪೂರ್ಣ ಚಾರ್ಜ್‍ನಲ್ಲಿ, ಈ ಹೆಲ್ಮೆಟ್‍ಗಳು 8 ಗಂಟೆಗಳವರೆಗೆ ಕೆಲಸ ಮಾಡಲಿದೆ. ಇದನ್ನೂ ಓದಿ: ಏ.20ಕ್ಕೆ ಚಿಕ್ಕಬಳ್ಳಾಪುರಕ್ಕೆ ಮೋದಿ

ಬಿಸಿಲಿನ ಹೊಡೆತಕ್ಕೆ ಸಿಕ್ಕು ಅಧಿಕಾರಿಗಳು ರಸ್ತೆಯಲ್ಲೇ ಮೂರ್ಛೆ ಹೋದ ನಿದರ್ಶನಗಳಿವೆ. ಇದರಿಂದಾಗಿ ಈ ಹೆಲ್ಮೆಟ್‍ಗಳನ್ನು ಪ್ರಾಯೋಗಿಕವಾಗಿ ನೀಡಲಾಗಿದೆ. ಇದು ಸಂಚಾರಿ ಪೊಲೀಸ್ ಸಿಬ್ಬಂದಿ, ತಮ್ಮ ಕರ್ತವ್ಯ ನಿರ್ವಹಣೆಯನ್ನು ಸರಾಗವಾಗಿ ಮಾಡಲು ಸಾಧ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

ಸುದ್ದಿ ಮಾಧ್ಯಮವೊಂದು ಎಕ್ಸ್‍ನಲ್ಲಿ ಮೂವರು ಟ್ರಾಫಿಕ್ ಪೊಲೀಸರು ಎಸಿ ಹೆಲ್ಮೆಟ್‍ಗಳನ್ನು ಧರಿಸಿ ರಸ್ತೆಯಲ್ಲಿ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಪೊಲೀಸ್ ಇಲಾಖೆಯ ಈ ನಡೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. ಬಳಕೆದಾರರು ನಮ್ಮ ರಾಜ್ಯದಲ್ಲೂ ಪೊಲೀಸ್ ಇಲಾಖೆಯು ಇದೇ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಟ್ರಾಫಿಕ್ ವಿಭಾಗದ ಡಿಸಿಪಿ ಆರತಿ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ನಗರದ ಆರು ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಪ್ರಾಯೋಗಿಕವಾಗಿ ಹೆಲ್ಮೆಟ್‍ಗಳನ್ನು ನೀಡಲಾಗಿದ್ದು, ಅದರ ಫಲಿತಾಂಶವೂ ಸಾಕಷ್ಟು ಯಶಸ್ವಿಯಾಗಿದೆ. ಶೀಘ್ರದಲ್ಲೇ ಈ ಎಸಿ ಹೆಲ್ಮೆಟ್ ನಗರದ ಇತರ ಭಾಗಗಳಲ್ಲಿ ನಿಯೋಜಿಸಲಾದ ಟ್ರಾಫಿಕ್ ಪೊಲೀಸರಿಗೂ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

Share This Article