ಹುಬ್ಬಳ್ಳಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಇಂದು ನಗರದ ವಿದ್ಯಾನಗರದ ಬಿ.ವ್ಹಿ.ಬಿ ಕಾಲೇಜಿನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮಹಾ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು.
ನಗರದ ಬಿ.ವ್ಹಿ.ಬಿ ಕಾಲೇಜಿನಿಂದ ಪ್ರಾರಂಭಗೊಂಡ ತ್ರಿವರ್ಣ ಧ್ವಜ ಯಾತ್ರೆ ಹೊಸೂರು, ಬಸವೇಶ್ವರ ವೃತ್ತ ಮಾರ್ಗವಾಗಿ ಚೆನ್ನಮ್ಮ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಅಂತ್ಯಗೊಂಡು ಸಭಾ ಕಾರ್ಯಕ್ರಮ ನಡೆಸಿದರು.
Advertisement
Advertisement
ಈ ವೇಳೆ ದೇಶದ ಸಮಗ್ರತೆ, ಸಾರ್ವಭೌಮತೆ, ಸುರಕ್ಷಿತತೆ, ಸುಭದ್ರತೆ ಹಾಗೂ ಸಾಮಾಜಿಕ ಸಾಮರಸ್ಯದ ಬಗ್ಗೆ ಕಾಳಜಿಯನ್ನು ಪೌರತ್ವ ಕಾಯಿದೆ ಹೊಂದಿದ್ದು, ಇದನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸುಳ್ಳು ಮಾಹಿತಿಯನ್ನು ಹರಡಿ ಜನರ ದಾರಿ ತಪ್ಪುಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರು ತಿಳಿಸಿದರು.
Advertisement
ಭಾರತವನ್ನು ಬಲಿಷ್ಠಗೊಳಿಸುವ ದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿ ಮಾಡಲಾಗಿದೆ. ಇದನ್ನು ದೇಶ ದ್ರೋಹ, ಮಾನಸಿಕತೆ ವಿಚಾರದಾರೆಯ ವಿರೋಧಿ ಮನಸ್ಸುಗಳು ಕ್ರೂರಿಯಂತೆ ಮಾನವೀಯ ಮೌಲ್ಯಗಳನ್ನು ಮರೆತು ವರ್ತಿಸುತ್ತಿರುವುದು ದುರದೃಷ್ಟಕರ ಸಂಗತಿ. ಈ ಹಿನ್ನಲೆಯಲ್ಲಿ ಜನತೆಯಲ್ಲಿ ಕಾಯಿದೆಯ ಬಗ್ಗೆ ಜನಜಾಗೃತಿ ಮೂಡಿಸಲು ಎಪಿವಿಪಿಯಿಂದ ಸಂವಾದ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುವುದ ಎಂದರು.