ಬೆಂಗಳೂರು: ಬೆಂಗಳೂರು ವಿವಿಯಲ್ಲಿ ಸರಣಿ ಪ್ರತಿಭಟನೆಗಳಿಂದ ಅವಾಂತರಗಳು ನಡೆದ ಬೆನ್ನಲ್ಲೇ ಬೆಂಗಳೂರು ವಿವಿ ಕುಲಸಚಿವರು ಮಹತ್ವದ ಆದೇಶ ಹೊರಡಿಸಿದ್ದಾರೆ. ರಾಜಕೀಯ ಸಂಘಟನೆಗಳಾದ ಎಬಿವಿಪಿ, ಎನ್‍ಎಸ್‍ಯುಐ, ಎಸ್‍ಎಫ್‍ಐ ಸೇರಿ ಯಾವುದೇ ಬಾಹ್ಯ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ.
Advertisement
ಸದ್ಯ ಕೊರೊನಾ ಕಾರಣದಿಂದ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಕೊರೊನಾ ಕಡಿಮೆ ಆದ ನಂತರ ಏನೇ ಸಮಸ್ಯೆಯಿದ್ದರೂ ಸಂಶೋಧನಾ & ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಮಾತ್ರ ಪ್ರತಿಭಟನೆ ನಡೆಸಬಹುದು ಎಂದಿದೆ. ಅಲ್ಲದೆ ರಾಜಕೀಯ ಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಫ್ಲೆಕ್ಸ್, ಬ್ಯಾನರ್‌ಗೂ ನಿಷೇಧವಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನು ಎಬಿವಿಪಿ ತೀವ್ರವಾಗಿ ವಿರೋಧಿಸಿ ಆದೇಶ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಮಾರಾಮಾರಿ – ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್
Advertisement
Advertisement
ಕಳೆದೆರಡು ದಿನಗಳ ಹಿಂದೆ ಎಬಿವಿಪಿ ಮತ್ತು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದನ್ನೂ ಓದಿ: ಪಂಚಮಸಾಲಿ ಸಮುದಾಯದಲ್ಲಿ ಕಲಹ – ನಿರಾಣಿ ಕೊಟ್ಟ ವಸ್ತು ಮರಳಿಸಲು ಮುಂದಾದ ಸ್ವಾಮೀಜಿ
Advertisement
ರಾಯಚೂರಿನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನವಾದ ಹಿನ್ನೆಲೆ ಬೆಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇತ್ತ ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗಿ ಬರುತ್ತಿರುವ ಹಿನ್ನೆಲೆ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮಾರಾಮಾರಿ ನಡೆದಿದೆ.
ಗಲಾಟೆ ವೇಳೆ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಸಂಶೋಧನಾ ವಿವಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಎರಡೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರ ನಡುವೆ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.