ಬೀದರ್: ಗ್ರಾ.ಪಂ ಅಧ್ಯಕ್ಷರ ಅಧಿಕಾರ ಚಲಾವಣೆ ಮಾಡಿದ ಆರೋಪದ ಮೇಲೆ ಪಿಡಿಒ (PDO) ಅನ್ನು ಅಮಾನತು ಮಾಡಲಾಗಿದೆ.
ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಹೆಡಗಾಪುರ ಗ್ರಾಮ ಪಂಚಾಯತಿ ಪಿಡಿಒ ಮಹಾಲಕ್ಷ್ಮಿ ಸೇವೆಯಿಂದ ಅಮಾನತಾಗಿದ್ದು, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:1 ವಾರ ಆಯ್ತು, ಕಸದ ಗಾಡಿಯೇ ಬಂದಿಲ್ಲ.. ಅಧಿಕಾರಿಗಳ ತಲೆಗೆ ಕಸ ಸುರಿಯುತ್ತೇವೆ: ಜನಾಕ್ರೋಶ
ಪಿಡಿಓ ನಿಯಮಿತವಾಗಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಜರುಗಿಸಲು ಕ್ರಮ ಕೈಗೊಂಡಿಲ್ಲ, ಕರ್ತವ್ಯ ಲೋಪ ಹಾಗೂ ಪಂಚಾಯತ ರಾಜ್ ಅಧಿನಿಯಮದ ನಿಯಮಗಳಿಗೆ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸದೇ ಇರುವುದು ದೃಢಪಟ್ಟ ಹಿನ್ನೆಲೆ ಪಿಡಿಒ ಮಹಾಲಕ್ಷ್ಮಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಜಿಪಂ ಸಿಇಒ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಬಿಸಾಡೋರಿಗೆ ಜಿಬಿಎ ಪಾಠ: ಮನೆಮುಂದೆಯೇ ಕಸ ಸುರಿದು 2,000 ರೂ. ದಂಡ
 


 
		 
		 
		 
		 
		
 
		 
		 
		 
		