ನವದೆಹಲಿ: ದೆಹಲಿ ಐಐಟಿಯ ಮುಖೇಶ್ ಗುಪ್ತಾ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ನಲ್ಲಿ ಜನರ ಅಭಿಪ್ರಾಯವನ್ನು ಕೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ದೆಹಲಿಯ ಐಐಟಿಯ ಮುಖೇಶ್ ಗುಪ್ತಾ ಎಂಬವರು ಟ್ಟಿಟ್ಟರ್ ನಲ್ಲಿ ಹಾಕಿದ್ದ ಅವಹೇಳನಕಾರಿ ಪೋಸ್ಟ್ ವಿರುದ್ಧ ಕೇಂದ್ರ ಸಚಿವೆ ತೀವ್ರವಾಗಿ ಖಂಡಿಸಿದ್ದಾರೆ. ನಾನು ಕೆಲವು ಟ್ವಿಟ್ಟರ್ ಪೋಸ್ಟ್ ಗಳನ್ನು ಲೈಕ್ ಮಾಡುತ್ತೇನೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದ ಪೋಸ್ಟ್ ನ ಕುರಿತು ನೀವೇ ನಿರ್ಧಾರ ತಿಳಿಸಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ವೋಟ್ ಮಾಡಿ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗು ಒಟ್ಟು 56,521 ಮಂದಿ ಟ್ವಿಟ್ಟರ್ ನಲ್ಲಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Advertisement
Friends : I have liked some tweets. This is happening for the last few days. Do you approve of such tweets ? Please RT
— Sushma Swaraj (@SushmaSwaraj) June 30, 2018
Advertisement
ಏನಿದು ಟ್ಟಿಟ್ಟರ್ ಪೋಸ್ಟ್?
ದೆಹಲಿಯ ಐಐಟಿ ಕಾಲೇಜಿನ ಮುಖೇಶ್ ಗುಪ್ತಾರವರು ತಮ್ಮ ಟ್ವಿಟ್ವರಿನಲ್ಲಿ, ಸುಷ್ಮಾ ಸ್ವರಾಜ್ ರಾತ್ರಿ ಮನೆಗೆ ಬಂದಾಗ ನೀವ್ಯಾಕೆ ಆಕೆಗೆ ಹೊಡೆದು ಮುಸ್ಲಿಂಮರನ್ನು ಓಲೈಸ್ಬೇಡಿ ಅಂತ ಯಾಕೆ ಹೇಳಾಬಾರದು, ಮುಸ್ಲಿಂಮರನ್ನು ಓಲೈಸುವುದರಿಂದ ಬಿಜೆಪಿಗೆ ಯಾವತ್ತೂ ವೋಟ್ ಸಿಗಲ್ಲ ಎಂದು ಸುಷ್ಮಾ ಸ್ವರಾಜ್ ಪತಿಗೆ ಪೋಸ್ಟ್ ಮಾಡಿದ್ದರು. ಮಹೇಶ್ ಗುಪ್ತಾರವರ ಟ್ಟಿಟ್ಟರ್ ಪೋಸ್ಟ್ಅನ್ನು ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ತೀವ್ರವಾಗಿ ಖಂಡಿಸಿದ್ದರು. ಅಲ್ಲದೇ ಇಂತಹ ಹೇಳಿಕೆಗೆ ಜನರೇ ಸರಿಯಾದ ಉತ್ತರ ಕೋಡುತ್ತಾರೆ ಎಂದು ಮುಖೇಶ್ ಗುಪ್ತಾರವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್
Advertisement
https://twitter.com/governorswaraj/status/1012949727774535680