ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿ ಹತ್ಯೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.
ಶ್ವೇತಭನವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ಐಸಿಸ್ ನಾಯಕ ಅಬುಬಕರ್ ಅಲ್ ಬಾಗ್ದಾದಿ ಇನ್ನು ಮುಂದೆ ಯಾವೊಬ್ಬ ಮಗು, ಮಹಿಳೆ ಹಾಗೂ ವ್ಯಕ್ತಿಗೆ ಕಾಟಕೊಡಲು ಸಾಧ್ಯವಿಲ್ಲ. ಆತ ನಾಯಿಯಂತೆ ಸತ್ತಿದ್ದಾನೆ. ಬಾಗ್ದಾದಿನನ್ನು ಅಮೆರಿಕ ಸೇನೆ ಕೊಂದು ಹಾಕಿದೆ. ನಾನು ಈ ಆಪರೇಷನ್‍ನ ಬಹುತೇಕ ಭಾಗವನ್ನು ವೀಕ್ಷಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಸೇನಾ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉಗ್ರ ನಾಯಕ ಬಾಗ್ದಾದಿ
Advertisement
US President Donald Trump: Last night the United States brought the world's number one terrorist leader to justice. Abu Bakr al-Baghdadi is dead. He was the founder and leader of ISIS, the most ruthless and violent terror organisation anywhere in the world. pic.twitter.com/k1RoL4HlHX
— ANI (@ANI) October 27, 2019
Advertisement
ಉಗ್ರ ಸಂಘಟನೆಗಳ ಪಾಲಿಗೆ ಇದೊಂದು ದೊಡ್ಡ ಸೋಲು. ಪ್ರಪಂಚ ಈಗ ಸುರಕ್ಷಿತವಾಯಿತು. ಈ ಕಾರ್ಯಾಚರಣೆಗೆ ಸಹಕಾರ ನೀಡಿದ ರಷ್ಯಾ, ಟರ್ಕಿ, ಸಿರಿಯಾ ಹಾಗೂ ಇರಾಕ್ ದೇಶಗಳಿಗೆ ಧನ್ಯವಾದ. ವಿಶ್ವದ ಅತ್ಯಂತ ಮೋಸ್ಟ್ ವಾಂಟೆಡ್ ಉಗ್ರ ಇಲ್ಲವಾದ ಅನ್ನೋದನ್ನ ಘೋಷಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
Advertisement
ಐಸಿಸ್ ಮುಖ್ಯಸ್ಥ ಬಾಗ್ದಾದಿ ತಲೆಗೆ 25 ದಶಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಅಮೆರಿಕ ಘೋಷಿಸಿತ್ತು. ಡೊನಾಲ್ಡ್ ಟ್ರಂಪ್ ಶನಿವಾರ ಟ್ವೀಟ್ ಮಾಡಿ, ಅತ್ಯಂತ ದೊಡ್ಡ ಘಟನೆಯೊಂದು ನಡೆಯಲಿದೆ ಎಂದು ಬರೆದುಕೊಂಡಿದ್ದರು.
Advertisement
#WATCH US President Donald Trump: He (Abu Bakr al-Baghdadi) will never again harm another innocent man, woman or child. He died like a dog, he died like a coward. The world is now a much safer place. pic.twitter.com/8NB69yA3b1
— ANI (@ANI) October 27, 2019