ಬೆಂಗಳೂರು: ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿತ್ತು. ಇನ್ನೇನು ಕೆಲ ದಿನಗಳಲ್ಲಿ ಮುಂಗಾರು ಮುಗಿದು, ಹಿಂಗಾರು ಮಳೆ (Post Mansoon Rain) ಆರಂಭವಾಗಲಿದ್ದು, ಈ ವರ್ಷಾಂತ್ಯದವರೆಗೂ ಜನರಿಗೆ ಮಳೆಕಾಟ ತಪ್ಪಿದ್ದಲ್ಲ.
2025ನೇ ಸಾಲಿನ ನೈಋತ್ಯ ಮುಂಗಾರು ಕೆಲ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಹಿಂಗಾರು ಮಳೆ ಆರಂಭಗೊಳ್ಳುತ್ತಿದೆ. ಈ ಮುಂಗಾರು ಮಳೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೂ ದಾಖಲೆಗಳ ಪ್ರಕಾರವಿತ್ತು. ಇದುವರೆಗೂ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಿದೆ. ಈ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 339 ಸೆಂಟಿ ಮೀಟರ್ ಮುಂಗಾರು ಮಳೆಯಾಗಿದ್ದು, ಸರಾಸರಿಗಿಂತ 14 ಸೆಂಟಿ ಮೀಟರ್ ಹೆಚ್ಚಿನ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಸಾಕಷ್ಟು ಮಳೆ ಅನಾಹುತಗಳು ಈ ವರ್ಷವಾಗಿವೆ. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!
ಇನ್ನೂ ಈ ವರ್ಷ ಮುಂಗಾರಿನಂತೆ ಹಿಂಗಾರು ಮಳೆಯೂ ವಾಡಿಕೆಗಿಂತ ಹೆಚ್ಚಾಗೋ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ (IMD) ತಿಳಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಇರಲಿದ್ದು, ಜನರಿಗೆ ಮಳೆ ಕಾಟ ತಪ್ಪಿದ್ದಲ್ಲ ಅಂತಾರೆ ಹವಾಮಾನ ಇಲಾಖೆಯ ವಿಜ್ಞಾನಿಗಳು. ಇದನ್ನೂ ಓದಿ: ರಮ್ಯಾಗೆ ಅವಹೇಳನ| ದರ್ಶನ್ ಅಭಿಮಾನಿಗಳ ವಿರುದ್ಧ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಒಟ್ಟಿನಲ್ಲಿ ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿದ್ದು, ರೈತರಿಗೆ ಹಾಗೂ ಜನರಿಗೆ ಸಂತಸವನ್ನುಂಟು ಮಾಡಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ 6 ಕಾರುಗಳಿಗೆ ಡಿಕ್ಕಿ ಹೊಡೆದ ಲ್ಯಾಂಡ್ ರೋವರ್ ಡಿಫೆಂಡರ್ – ಚಾಲಕ ವಶಕ್ಕೆ