ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮಾ.11ರಂದು ತಡರಾತ್ರಿಯವರೆಗೂ ನಡೆದಿದ್ದು, 28 ದಿನಗಳಲ್ಲಿ ಒಟ್ಟು 2.83 ಕೋಟಿ ರೂ. ಸಂಗ್ರಹವಾಗಿದೆ.
Advertisement
ಹುಂಡಿ ಎಣಿಕೆ ಕಾರ್ಯದಲ್ಲಿ 300 ಸಿಬ್ಬಂದಿ ಪಾಲ್ಗೊಂಡಿದ್ದರು. ಹೆಚ್ಚಿನ ಮೊತ್ತವಿದ್ದ ಹಿನ್ನೆಲೆ ಶುಕ್ರವಾರ ತಡರಾತ್ರಿ ತನಕ ನಡೆದ ಎಣಿಕೆ ಕಾರ್ಯದಲ್ಲಿ 2,83,12,841 ರೂ. ನಗದು ಸಂಗ್ರಹವಾಗಿದೆ. 73 ಗ್ರಾಂ ಚಿನ್ನ, 3 ಕೆ.ಜಿ 800 ಗ್ರಾಂ ಬೆಳ್ಳಿ ದೊರೆತಿದೆ. ಶಿವರಾತ್ರಿ ಮಹೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ ಕಾಣಿಕೆ ಅರ್ಪಿಸಿದೆ. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ
Advertisement
Advertisement
ಇದಕ್ಕೂ ಮುನ್ನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಫೆಬ್ರವರಿ 10ರಂದು ನಡೆದಿತ್ತು. ಆಗ 1.87 ಕೋಟಿ ರೂ. ಸಂಗ್ರಹವಾಗಿತ್ತು. ಇದನ್ನೂ ಓದಿ: ಹೆಚ್‍ಡಿಕೆ ಸದನದಲ್ಲಿ ಸದ್ದು ಮಾಡಿದ್ರೂ ನಿಂತಿಲ್ಲ ಜೂಜಾಟ- ಪೊಲೀಸ್ ಅಧಿಕಾರಿಯೇ ಕಿಂಗ್‍ಪಿನ್