ನವದೆಹಲಿ: ಇನ್ಮುಂದೆ 17 ವರ್ಷ ಮೇಲ್ಪಟ್ಟ ಯುವ ಜನರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂಚಿತವಾಗಿಯೇ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತದ ಚುನಾವಣಾ ಆಯೋಗ ಹೇಳಿದೆ.
ದೇಶದ ಕಾನೂನಿನ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ 18 ವರ್ಷ ತುಂಬಿದ ಬಳಿಕ ಮತದಾನದ ಹಕ್ಕು ನೀಡಲಾಗಿದೆ. ಆದರೆ ಈಗ 17 ವರ್ಷದವರು ಕೂಡ ತಮ್ಮ ಹೆಸರನ್ನು ನೋಂದಾಯಿಸಲು ಮತದಾನದ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಾರ್ಥ ಚಟರ್ಜಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಮಮತಾ ಬ್ಯಾನರ್ಜಿ
Advertisement
Advertisement
ಯುವ ಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಜನವರಿ 1ಕ್ಕೆ 18 ವರ್ಷ ವಯಸ್ಸನ್ನು ತಲುಪುವ ಪೂರ್ವಾಪೇಕ್ಷಿತ ಮಾನದಂಡಕ್ಕಾಗಿ ಕಾಯಬೇಕಾಗಿಲ್ಲ. ಅದನ್ನೀಗ ಮತ್ತಷ್ಟು ಸುಲಭಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ (CES) ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನೇತೃತ್ವದ ಚುನಾವಣಾ ಸಂಸ್ಥೆಯು ಎಲ್ಲಾ ರಾಜ್ಯಗಳ ಸಿಇಒಗಳು /ERO/ AEROಗಳು ಯುವಜನರು ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುವ ತಂತ್ರಜ್ಞಾನದ ಬಗ್ಗೆ ಕೆಲಸ ಮಾಡಲು ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಖಂಡಿಸಿ 19 ಮಂದಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆ
Advertisement
Advertisement
ಹಾಗಾಗಿ 17 ವರ್ಷಕ್ಕಿಂತ ಮೇಲ್ಪಟ್ಟ ಯುವ ಜನತೆ ಈಗ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಇಸಿಐ ಹೇಳಿದೆ. ಅಲ್ಲದೇ 2023ರ ನಂತರ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ನವೀಕರಿಸಲಾಗುತ್ತದೆ. 2023ರ ಪಟ್ಟಿ ಪರಿಷ್ಕರಣೆಗಾಗಿ 18 ವರ್ಷ ಮೇಲ್ಪಟ್ಟವರು 2023ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರ ದಿನಾಂಕಗಳಲ್ಲಿ ಮುಂಗಡ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.