ರಮ್ಯಾ – ರಾಗಿಣಿ ಮುನಿಸು ಮಾಯವಾಯ್ತಾ?

Public TV
1 Min Read
RAMYA RAGINI

ಮೋಹಕ ತಾರೆ ರಮ್ಯಾ ಇದೀಗ ಸಂಪೂರ್ಣವಾಗಿ ರಾಜಕಾರಣದಲ್ಲಿ ಕಳೆದು ಹೋಗಿದ್ದಾರೆ. ಆದರೆ ಈಗಲೂ ಕೂಡಾ ಹಲವಾರು ಮಂದಿ ಅವರು ಮತ್ತೆ ಬಂದು ಚಿತ್ರಗಳಲ್ಲಿ ನಟಿಸಲಿ ಎಂದೇ ಬಯಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ರಮ್ಯಾ ಜೊತೆ ಕಿತ್ತಾಡಿಕೊಂಡಿದ್ದ ರಾಗಿಣಿ ದ್ವಿವೇದಿ ಕೂಡಾ ಅದನ್ನೇ ಬಯಸುತ್ತಿದ್ದಾರಾ ಎಂಬ ಅಚ್ಚರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿದೆ!

ragini

ಟ್ವಿಟ್ಟರ್‍ನಲ್ಲಿ ರಮ್ಯಾ ಅಭಿಮಾನಿಯೊಬ್ಬರು ಅವರು ಮತ್ತೆ ಬರಬೇಕೆಂದು ಗೋಗರೆಯುವಂತೆ ಒಂದು ಟ್ವೀಟ್ ಮಾಡಿದ್ದರು. ಅದನ್ನು ರಾಗಿಣಿ ದ್ವಿವೇದಿ ಕೂಡಾ ರೀಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವಿಚಾರಕ್ಕೆ ಸಹಮತ ವ್ಯಕ್ತಪಡಿಸಲು ಈ ರೀ ಟ್ವೀಟ್ ಬಳಕೆಯಾಗುತ್ತದೆ. ರಾಗಿಣಿ ಕೂಡಾ ಅದನ್ನೇ ಮಾಡಿರೋದರಿಂದ ಅವರೂ ಕೂಡಾ ಮುನಿಸು ಮರೆತು ಮತ್ತೆ ರಮ್ಯಾ ಚಿತ್ರ ರಂಗಕ್ಕೆ ಮರಳಲಿ ಅಂತ ಆಶಿಸುತ್ತಿದ್ದಾರಾ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡುತ್ತಿದೆ.

RAMYA RAGINI MUNISU

ರಾಗಿಣಿ ದ್ವಿವೇದಿ ಅವರ ಈ ನಡೆ ಅಚ್ಚರಿ ಮೂಡಿಸಲು ಕಾರಣ ಇಲ್ಲದಿಲ್ಲ. ವರ್ಷಾಂತರಗಳ ಹಿಂದೆ ರಾಗಿಣಿ ರಮ್ಯಾ ವಿರುದ್ಧ ಮಾತಾಡಿದ್ದರೆಂಬ ಬಗ್ಗೆ ಗುಲ್ಲೆದ್ದಿತ್ತು. ಈ ವಿಚಾರವಾಗಿ ರಮ್ಯಾ ಕೂಡಾ ಪರೋಕ್ಷವಾಗಿ ರಾಗಿಣಿಯವರನ್ನು ಫೇಸ್ ಬುಕ್ ಮೂಲಕ ತಿವಿದಿದ್ದರು. ರಾಗಿಣಿ ಕೂಡಾ ಅದಕ್ಕೆ ಅಷ್ಟೇ ಮೊನಚಾಗಿ ಮಾರುತ್ತರ ನೀಡಿದ್ದರು.

ಈ ಮೂಲಕ ರಮ್ಯಾ ಮತ್ತು ರಾಗಿಣಿ ವಿರುದ್ಧಾರ್ಥಕ ಪದಗಳಂತಾಗಿದ್ದರು. ಆದರೀಗ ಇವರಿಬ್ಬರ ನಡುವೆ ಮುನಿಸಿನ ಮುಸುಕು ಸರಿದಂತಿದೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

RAMYA 1

Share This Article