ಬೀದರ್: ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಹನುಮಾನ್ ದೇವಸ್ಥಾನದಲ್ಲಿ ಹಲವು ವಿಸ್ಮಯಗಳು ನಡೆಯುತ್ತಿವೆ. ಎಲ್ಲಾ ದೇವಸ್ಥಾನಗಳು ದಕ್ಷೀಣಾಮುಖಿವಾಗಿ ಇದ್ರೆ ಈ ದೇವಸ್ಥಾನ ಮಾತ್ರ ಉತ್ತರಾಭಿಮುಖಿವಾಗಿರುವುದು ಒಂದು ವಿಶೇಷವಾಗಿದೆ. ಇಲ್ಲಿಗೆ ಹನುಮಂತ ಮತ್ತು ಲಕ್ಷ್ಮಣ ಬಂದ ಪ್ರತೀತಿ ಇದೆ. ಈ ಹನುಮಾನ್ ಎಂದ್ರೆ ಈ ತೆಂಗಿನ ಕಾಯಿ ಪವಾಡ ಎಂದು ಖ್ಯಾತವಾಗಿದೆ.
Advertisement
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದಲ್ಲಿರುವ ಈ ಉತ್ತಾರಾಭಿಮುಖಿ ಹನುಮಾನ್ ದೇವಸ್ಥಾನಕ್ಕೆ ಮಕ್ಕಳಾಗದ ಮಹಿಳೆಯರು ಬಂದು ದೇವಾಲಯದ ಗೋಡೆ ಮೇಲೆ ತೆಂಗಿನಕಾಯಿ ಕಟ್ಟಿದ್ರೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ. ಇದರ ಒಳಿತನ್ನು ಕಂಡವರೂ ಇದ್ದಾರೆ.
Advertisement
ಇದಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಬರುವ ಭಕ್ತರು ಕಷ್ಟವನ್ನು ಹೇಳಿಕೊಂಡು ತೆಂಗಿನ ಕಾಯಿ ಕಟ್ಟುತ್ತಾರೆ. ಕಷ್ಟ ಪರಿಹಾರವಾದ ಮೇಲೆ ತೆಂಗಿನಕಾಯಿಯನ್ನು ಬಿಚ್ಚಿಕೊಂಡು ಹೋಗ್ತಾರೆ ಅಂತ ಭಕ್ತರಾದ ವಿಮಲಾಬಾಯಿ ಹೇಳಿದ್ದಾರೆ.
Advertisement
Advertisement
ಈ ಗ್ರಾಮಕ್ಕೆ ಚಳಕಾಪೂರ ಎಂದು ಹೇಸರು ಬರಲೂ ಒಂದು ಕಾರಣವಿದೆ. ಈ ಹಿಂದೆ “ಚಾಳಕಾದೇವಿ” ಎಂಬ ರಾಮನ ಭಕ್ತೆ ಇಲ್ಲಿ ವಾಸವಿದ್ದಳಂತೆ. ಆಕೆಯ ಪತಿ “ಚಳಕಾಸುರ್” ಎಂಬ ರಾಕ್ಷಸನ ಅಟ್ಟಹಾಸ ಜೋರಾಗಿದ್ದಾಗ ರಾಮನಿಂದ ಆ ರಾಕ್ಷಸನ ವಧೆಯಾಗಿತ್ತಂತೆ. ಹೀಗಾಗಿ ಇದಕ್ಕೆ ಚಳಕಾಪುರ ಎಂಬ ಹೆಸ್ರು ಬಂದಿದೆ. ಇನ್ನು ಇಲ್ಲಿನ ಹನುಮಂತ ಉದ್ಭವ ಮೂರ್ತಿಯಾಗಿದ್ದು, ದೇವಸ್ಥಾನದ ಪಕ್ಕದಲೇ ಒಂದು ಗುಡ್ಡವಿದ್ದು ಅದನ್ನು ಸಂಜೀವಿನಿ ಪರ್ವತ ಎಂದು ಕರೆಯಲಾಗುತ್ತೆ ಅಂತ ಭಕ್ತರಾದ ಮೇಘಾ ಕುಲಕರ್ಣಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv