ನಿಶಾಂತ್ ಜೊತೆ ಡೇಟಿಂಗ್ ವಿಚಾರ: ನಟಿ ಕಂಗನಾ ಪ್ರತಿಕ್ರಿಯೆ

Public TV
2 Min Read
kangana ranaut 1

ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ (Dating)ನಲ್ಲಿ ಇರುವ ವಿಚಾರ ಹಾಗಾಗ್ಗೆ ಮುನ್ನೆಲೆಗೆ ಬರುತ್ತದೆ. ಅದರಲ್ಲೂ ಈಸ್ ಮೈಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ (Nishant Pitti) ಜೊತೆ ಕಂಗನಾ ಕಾಣಿಸಿಕೊಂಡಾಗೆಲ್ಲ ಇಬ್ಬರ ಹೆಸರೂ ತಳುಕು ಹಾಕಿಕೊಳ್ಳುತ್ತದೆ. ಈ ಬಾರಿಯೂ ಅದೇ ಆಗಿದೆ. ನಿಶಾಂತ್ ಜೊತೆ ಕಂಗನಾ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

chandramukhi 2 kangana ranaut

ಸುದ್ದಿ ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದಂತೆಯೇ ಕಂಗನಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ನಿಶಾಂತ್ ಮದುವೆ ಆಗಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ. ನಿಶಾಂತ್ ಅವರಿಗೆ ಈಗಾಗಲೇ ಮದುವೆ ಆಗಿದೆ. ನಮ್ಮಿಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಅವರ ಸಂಸಾರ ಹಾಳು ಮಾಡಬೇಡಿ. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರೂ, ಅದನ್ನು ಹೇಳುವುದಕ್ಕಾಗಿ ಸಮಯ ಕೊಡಿ ಎಂದು ಕಂಗನಾ ಹೇಳಿದ್ದಾರೆ.

kangana

ಈ ನಡುವೆ  ಕಂಗನಾ ರಣಾವತ್  ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ. ಕಂಗನಾ ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಕಂಗನಾ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ‘ನಾವು ಘೋಷಿಸಿದ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದರು. ಈಗ ಜೂನ್ ನಲ್ಲಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಪ್ ಡೇಟ್ ನೀಡಿದ್ದಾರೆ.

kangana ranaut emergency 2

ಕಂಗನಾ ರಣಾವತ್ (Kangana Ranaut) ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ, ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದರೆ ಮತ್ತೊಂದು ಚಿತ್ರದಲ್ಲಿ ಕೇವಲ ನಟಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ನಡುವೆ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.  ಎಮರ್ಜೆನ್ಸಿ ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಲಿರುವ, ಸಂದೀಪ್ ಸಿಂಗ್ (Sandeep Singh) ನಿರ್ಮಾಣದ ಹೊಸ ಸಿನಿಮಾದಲ್ಲಿ ಅವರು ನಟಿಸಲಿದ್ದಾರಂತೆ.

 

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

Share This Article