ಮಂಡ್ಯ: ಗರ್ಭಪಾತದ ವೇಳೆ ತುರುವೇಕೆರೆಯ ಸರ್ಕಾರಿ ವೈದ್ಯರ ಎಡವಟ್ಟಿನಿಂದಾಗಿ 5 ತಿಂಗಳ ಗರ್ಭಿಣಿಯೊಬ್ಬರು ಈಗ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದೊಡ್ಡಬೀರನಕೆರೆ ಗ್ರಾಮದ 5 ತಿಂಗಳ ಗರ್ಭಿಣಿ ರಾಧಾ, ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಬುಧವಾರ ತುರುವೇಕೆರೆ ತಾಲೂಕಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ರಾಧಾ ಅವರಿಗೆ ವೈದ್ಯ ದಂಪತಿ ಪುರುಷೋತ್ತಮ್ ಮತ್ತು ಅವರ ಪತ್ನಿ ಸುಜಾತ ಗರ್ಭಪಾತ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Advertisement
Advertisement
ವೈದ್ಯರು ಗರ್ಭಪಾತ ಮಾಡುವಾಗ ಬೆಳವಣಿಗೆಯಾಗದ ಭ್ರೂಣ ಹೊರ ಬಂದಿದೆ. ರಾಧಾ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ವೈದ್ಯರು ರಾಧಾರನ್ನು ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್‍ನಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಸೇರಿಸಿ ಹೊರಟು ಹೋಗಿದ್ದಾರೆ.
Advertisement
ಇತ್ತ ನನ್ನ ಅನುಮತಿಯಿಲ್ಲದೇ ವೈದ್ಯರು ನನ್ನ ಮಗುವನ್ನು ಗರ್ಭಪಾತ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ದೂರು ನೀಡಿದರೂ ತುರುವೇಕೆರೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ರಾಧಾ ಪತಿ ಬಸವರಾಜು ಆರೋಪ ಮಾಡಿದ್ದಾರೆ.
Advertisement
12 ವರ್ಷಗಳ ಹಿಂದೆ ಸೋದರಮಾವ ಬಸವರಾಜು ಜೊತೆ ರಾಧಾ ಮದುವೆಯಾಗಿದ್ದರು. ಈಗಾಗಲೇ ರಾಧಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಶಾ ಕಾರ್ಯಕರ್ತೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ವೈದ್ಯರ ಎಡವಟ್ಟಿನ ಹಿಂದೆ ಹೆಣ್ಣು ಭ್ರೂಣ ಹತ್ಯೆಯ ಅನುಮಾನ ಕೂಡ ವ್ಯಕ್ತವಾಗುತ್ತಿದ್ದು, ವ್ಯಾಪಕ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv