-ಅಬ್ ಕೀ ಬಾರ್ ಟ್ರಂಪ್ ಸರ್ಕಾರ
ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹೆಸರನ್ನು ಪ್ರಸ್ತಾಪಿಸಿದರು. ಹ್ಯೂಸ್ಟನ್ ನ ಎನ್‍ಆರ್ ಜಿ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದರು.
ಇಂದು ಬೆಳಗ್ಗೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದೇನೆ. ಇಂದು ವ್ಯಕ್ತಿ ನಮ್ಮ ಜೊತೆಯಲ್ಲಿದ್ದು, ಅವರ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ ಎಂದು ಭಾಷಣದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದರು.
Advertisement
#WATCH PM Narendra Modi: We in India have connected well with President Trump, the words of candidate Trump, 'Ab ki baar Trump sarkar', rang loud and clear. pic.twitter.com/9WPq9w7eKf
— ANI (@ANI) September 22, 2019
Advertisement
ಟ್ರಂಪ್ ಇಂದು ಈ ಕಾರ್ಯಕ್ರಮಕ್ಕೆ ಬಂದಿರೋದು ಹೆಮ್ಮೆಯ ವಿಚಾರ. ಸ್ನೇಹಶೀಲತೆ, ವಿಶ್ವಾಸಕ್ಕೆ ಟ್ರಂಪ್ ಉದಾಹರಣೆ. ಅಮೆರಿಕದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಸದೃಢ ಮಾಡುವ ಗುರಿಯನ್ನು ಟ್ರಂಪ್ ಹೊಂದಿದ್ದಾರೆ. ಅಬ್ ಕೀ ಬಾರ್ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಎಂದು ಹೇಳಿದರು.
Advertisement
ಟ್ರಂಪ್ ಭೇಟಿಯಾಗುವ ಅವಕಾಶ ನನಗೆ ಹಲವು ಬಾರಿ ಸಿಕ್ಕಿದೆ. ಪ್ರತಿ ಬಾರಿಯೂ ಅವರಲ್ಲಿಯೂ ನಾನು ಮಿತ್ರತ್ವ ಭಾವನೆಯನ್ನು ನೋಡಿದ್ದೇನೆ. ಪ್ರತಿಬಾರಿ ಭೇಟಿಯಾದಗಲೂ ನಮ್ಮ ಸ್ನೇಹ ಗಟ್ಟಿಯಾಗುತ್ತಾ ಸಾಗಿದೆ. ವೈಟ್ ಹೌಸ್ ನಲ್ಲಿ ಟ್ರಂಪ್ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ.ನಾನು ಮೊದಲ ಬಾರಿ ಟ್ರಂಪ್ ರನ್ನು ಭೇಟಿಯಾದಾಗ ವೈಟ್ ಹೌಸ್ ನಲ್ಲಿ ಭಾರತದ ಗೆಳೆಯನೊಬ್ಬನಿದ್ದಾನೆ ಎಂದು ಹೇಳಿದ್ದರು. ಇಂದು ನಿಮ್ಮೆಲ್ಲರು ಹಾಜರಿ ಎರಡು ದೇಶಗಳ ಸ್ನೇಹಕ್ಕೆ ಸಾಕ್ಷಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಬಹು ಎತ್ತರದತ್ತ ಸಾಗಿದೆ. ಇಂದು ಅಧ್ಯಕ್ಷ ಟ್ರಂಪ್ ನಮ್ಮ ಸಂಬಂಧದ ಹೃದಯ ಬಡಿತವನ್ನು ಕೇಳಬಹುದು.
Advertisement
ಭಾರತದಲ್ಲಿ ಇಂದು ಭಾನುವಾರದ ರಾತ್ರಿಯಾಗದ್ದರೂ ಜನರು ಟಿವಿ ಮುಂದೆ ಕುಳಿತು ಇತಿಹಾಸ ನಿರ್ಮಾಣ ಆಗೋದನ್ನು ವೀಕ್ಷಿಸುತ್ತಿದ್ದಾರೆ. 2017ರಲ್ಲಿ ಟ್ರಂಪ್ ನಮಗೆ ನಮ್ಮ ಪರಿವಾರದೊಂದಿಗೆ ಸೇರಿಸಿದ್ದರು. ಇಂದು ನಾನು ನಿಮಗೆ ನಮ್ಮ ಪರಿವಾರವನ್ನು ಪರಿಚಯಿಸುವ ಅವಕಾಶ ಲಭಿಸಿದೆ. ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗಿದ್ದು, ಹ್ಯೂಸ್ಟನ್ ಟು ಹೈದರಾಬಾದ್, ಬೋಸ್ಟನ್ ಟು ಬೆಂಗಳೂರು, ಚಿಕಾಗೋ ಟು ಶಿಮ್ಲಾ, ಲಾಸ್ ಏಂಜೆಲಸ್ ಟು ಲೂಧಿಯಾನ, ನ್ಯೂ ಜೆರ್ಸಿ ಟು ನ್ಯೂ ದೆಹಲಿ ಜನರ ನಾಡಿ ಮಿಡಿತ ಒಂದಾಗಿದೆ.