ಸ್ಯಾಂಡಲ್‌ವುಡ್‌ನ (Sandalwood) ಮರಿ ರೆಬೆಲ್ ಅಭಿಷೇಕ್ ಅಂಬರೀಶ್ (Abhishek Ambreesh) ಮತ್ತೆ ಸುದ್ದಿಯಲ್ಲಿದ್ದಾರೆ. ಭಾವಿ ಪತ್ನಿ ಅವಿವಾ (Aviva) ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
`ಅಮರ್’ ಹೀರೋ ಅಭಿಷೇಕ್ ಅಂಬರೀಶ್ ಅವರ ಮನದರಸಿ ಅವಿವಾ ಬಿದ್ದಪ್ಪ (Aviva Bidappa) ಅವರ ಹುಟ್ಟಹಬ್ಬವಾಗಿದ್ದು, ವಿಶೇಷ ಫೋಟೋ ಮೂಲಕ ಕ್ಯೂಟ್ ಆಗಿ ಅಂಬಿ ಪುತ್ರ ವಿಶ್ ಮಾಡಿದ್ದಾರೆ. ಅಭಿಷೇಕ್- ಅವಿವಾ ವಿದೇಶ ಪ್ರವಾಸಕ್ಕೆ ಹೋದಾಗಿನ ಫೋಟೊ, ಇಬ್ಬರೂ ಒಟ್ಟಿಗಿರುವ ಹಳೆಯ ಫೋಟೊ, ಅವಿವಾರ ಬಾಲ್ಯದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಹಂಚಿಕೊಂಡಿದ್ದು, ನಾನು ನಿನ್ನನ್ನು ಪಡೆದುಕೊಂಡು ಬಿಟ್ಟೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು, ಅದ್ಭುತವಾದ ವರ್ಷ ನಿನ್ನದಾಗಲಿ, ಮುಂದೆ ಬರುವ ಎಲ್ಲದಕ್ಕೂ ನಾನು ಕಾತರನಾಗಿದ್ದೇನೆ. ದೇವರು ನಿನಗೆ ಒಳ್ಳೆಯದು ಮಾಡಲಿ ಲಿಟಲ್ ಕ್ಯೂಟಿ ಎಂದು ಮುದ್ದಾಗಿ ವಿಶ್ ಮಾಡಿದ್ದಾರೆ.
View this post on Instagram
ಅಭಿಷೇಕ್ ಅಂಬರೀಶ್ ಜೊತೆಗಿನ ಕ್ಯೂಟ್ ಫೋಟೊವೊಂದನ್ನು ಹಂಚಿಕೊಂಡಿರುವ ಅವಿವಾ, ಇದು ನನ್ನ ಈವರೆಗಿನ ಅತ್ಯುತ್ತಮ ಹುಟ್ಟುಹಬ್ಬ. ಸಮಯ ಮಾಡಿಕೊಂಡು ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಅವಿವಾರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಭಿಷೇಕ್, ಹುಟ್ಟುಹಬ್ಬದ ಶುಭಾಶಯಗಳು, ಅತ್ಯುತ್ತಮ ವರ್ಷ ನಿನ್ನದಾಗಲಿ. ನನ್ನ ನಗು, ಪ್ರೀತಿ, ಖುಷಿ ಎಲ್ಲವೂ ನೀನೇ ನಾನು ಸದಾ ನಿನ್ನವನಾಗಿ ಇರುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಇಬ್ಬರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
View this post on Instagram
ಅಭಿಷೇಕ್ ಹಾಗೂ ಅವಿವಾ ಜೋಡಿಯ ನಿಶ್ಚಿತಾರ್ಥ ಡಿಸೆಂಬರ್ 11ರಂದು ಬೆಂಗಳೂರಿನಲ್ಲಿ ನಡೆದಿತ್ತು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೆಲವರಿಗಷ್ಟೆ ಆಹ್ವಾನ ನೀಡಲಾಗಿತ್ತು. ತೀರ ಆಪ್ತರಿಗೆ ಆಹ್ವಾನವಿದ್ದು ನಟ ಯಶ್- ರಾಧಿಕಾ ಪಂಡಿತ್, ರಾಕ್‌ಲೈನ್ ವೆಂಕಟೇಶ್ ಇನ್ನು ಕೆಲವರಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.