ಸ್ಯಾಂಡಲ್‌ವುಡ್‌ಗೆ (Sandalwood) ‘ನಮ್ ಗಣಿ ಬಿ.ಕಾಂ ಪಾಸ್’ (Nam Gani B.com Pass) ಚಿತ್ರದ ಮೂಲಕ ನಟ-ಕಮ್ ನಿರ್ದೇಶಕನಾಗಿ ಅಭಿಷೇಕ್ ಶೆಟ್ಟಿ (Abhishek Shetty) ಪಾದಾರ್ಪಣೆ ಮಾಡಿದ್ದರು. ಇದೀಗ ಈ ಚಿತ್ರದ ಪಾರ್ಟ್ 2ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಅಭಿಷೇಕ್ ಶೆಟ್ಟಿಗೆ ಜೋಡಿಯಾಗುವ ಆ ನಾಯಕಿ ಯಾರು? ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಅಭಿಷೇಕ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮತ್ತೆ ‘ನಮ್ ಗಣಿ ಬಿ.ಕಾಂ ಪಾಸ್’ ಸಿನಿಮಾ ಬರುತ್ತಿದೆ. ಲವ್ ಸ್ಟೋರಿ ಜೊತೆ ಫನ್ ಎಂಟರ್‌ಟೈನ್‌ಮೆಂಟ್ ಸಿನಿಮಾವಾಗಿದ್ದು, ಮೊದಲ ಭಾಗದ ಕಥೆಯೇ ಪಾರ್ಟ್ 2ನಲ್ಲಿ ಮುಂದುವರೆಯಲಿದೆ. ಸಾಕಷ್ಟು ಟ್ವಿಸ್ಟ್ ಈ ಚಿತ್ರದಲ್ಲಿ ಇರಲಿದೆ. ಇದೇ ಏಪ್ರಿಲ್‌ನಲ್ಲಿ ಚಿತ್ರದ ಶೂಟಿಂಗ್ ಶುರುವಾಗಿದೆ. ಇದನ್ನೂ ಓದಿ:ಗಾಂಜಾ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದ ಬಿಗ್ ಬಾಸ್ ಸ್ಪರ್ಧಿ
ಅಭಿಷೇಕ್ ಶೆಟ್ಟಿ ನಾಯಕಿಯಾಗಿ ಐಶಾನಿ ಶೆಟ್ಟಿ (Aishani Shetty) ನಟಿಸಿದ್ದರು. ಈಗ ಪಾರ್ಟ್ 2ಲ್ಲಿ ನಾಯಕಿಯಾಗಿ ಕರಾವಳಿ ನಟಿ ಕಾಣಿಸಿಕೊಳ್ತಾರಾ? ಅಥವಾ ಅವರ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗುತ್ತಾ? ಕಾಯಬೇಕಿದೆ. ಅಭಿಷೇಕ್ ಹುಟ್ಟುಹಬ್ಬದಂದು (ಫೆ.22) ಚಿತ್ರದ ಫಸ್ಟ್ ಲುಕ್ ಜೊತೆಗೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.
ಅನೀಶ್- ಮಿಲನಾ ನಾಗರಾಜ್ ಕಾಂಬಿನೇಷನ್ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಅಭಿಷೇಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರಿಲೀಸ್ ಬಗ್ಗೆ ಅಪ್‌ಡೇಟ್ ನೀಡಲಿದ್ದಾರೆ. ಇತ್ತೀಚೆಗೆ ತಮ್ಮ ಎಂಗೇಜ್‌ಮೆಂಟ್ ಬಗ್ಗೆ ಅಭಿಷೇಕ್ ಸಿಹಿಸುದ್ದಿ ನೀಡಿದ್ದರು. ಈ ಬೆನ್ನಲ್ಲೇ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.