ಬೆಂಗಳೂರು: ಅಂಬಿಯನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದ ಸುಮಲತಾ ಅವರನ್ನು ನಗಿಸಲು ಪುತ್ರ ಅಭಿಷೇಕ್ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ತಂದೆಯ ಜೊತೆಗಿನ ನೆನಪನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.
Advertisement
Advertisement
ಅಭಿಷೇಕ್ ಹೇಳಿದ್ದು ಹೀಗೆ:
ನನಗೆ ಮೂರು ವರ್ಷವಿದ್ದಾಗ ಅಪ್ಪ-ಅಮ್ಮ ಜೊತೆ ಸಿಂಗಾಪುರಕ್ಕೆ ಹೋಗಿದ್ದೆ. ಅಪ್ಪ ಸಿಂಗಾಪುರಕ್ಕೆ ಹೋದರೂ ಅವರಿಗೆ ಭಾರತ ತರಹ ಇರಬೇಕು. ಹೊಟೇಲ್ ರೂಮಿನಲ್ಲಿ ಭಾರತದ ಆಹಾರ ಇಡ್ಲಿ, ಉಪ್ಪಿಟ್ಟು, ದೊಸೆ ತಿನ್ನುತ್ತಿದ್ದರು. ಆದರೆ ಅಮ್ಮನಿಗೆ ಹೊರಗೆ ಶಾಪಿಂಗ್ ಹೋಗುವುದಕ್ಕೆ ಇಷ್ಟವಿತ್ತು.
Advertisement
ಅಮ್ಮ ಕೊನೆಯ ದಿನವರೆಗೂ ನಮಗೆ ಕಾಯುತ್ತಿದ್ದು, ನಾನು ಅಪ್ಪ ನಿದ್ದೆಯಿಂದ ಏಳುವ ಮೊದಲು ಟಿವಿ ಮೇಲೆ ‘ಗೋನ್ ಶಾಪಿಂಗ್’ ಎಂದು ಬರೆದು ಹೋಗಿದ್ದರು. ನಾನು ನಿನ್ನೆ, ಮೊನ್ನೆ ಇದನ್ನು ನೆನಪಿಸಿಕೊಳ್ಳುತ್ತಿದ್ದೆ. ನಾನು ಆಗ ಚಿಕ್ಕವನಿದ್ದೆ. ಬೆಳಗ್ಗೆ ಎದ್ದಾಗ ಅಮ್ಮನನ್ನು ಹುಡುಕುತಿದ್ದೆ. ಅಪ್ಪ ಪಕ್ಕದಲ್ಲಿ ಸುಮ್ಮನೆ ಕುಳಿತ್ತಿದ್ದರು. ನನಗೆ ಅಪ್ಪ ಎಂದರೆ ಭಯವಾಗುತ್ತಿತ್ತು. ಅವರಿಗೂ ಈ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂದು ಒಳಗೊಳಗೆ ಹೆದರಿಕೊಳ್ಳುತ್ತಿದ್ದರು.
Advertisement
ನಾನು ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಆಗ ಏನಾಯಿತು ಅಂತಾ ಕೇಳಿದರು. ನಾನು ಆಗ ಬಾತ್‍ರೂಮಿಗೆ ಹೋಗಬೇಕು ಎಂದು ಹೇಳಿದೆ. ಆಗ ಬಾತ್‍ರೂಮಿಗೆ ಕರೆದುಕೊಂಡು ಹೋಗಿ ಸರಿ ಮಾಡ್ಕೋ ಹೋಗು ಅಂದರು. ಸ್ವಲ್ಪ ಸಮಯದ ಬಳಿಕ ಮತ್ತೆ ಅಳುವುದಕ್ಕೆ ಶುರು ಮಾಡಿದೆ. ಆಗ ಏನು ಎಂದು ಕೇಳಿದರು? ಅದಕ್ಕೆ ನಾನು ಹಲ್ಲು ಉಜ್ಜು ಎಂದು ಹೇಳಿದೆ. ಆಗ ಹಲ್ಲು ಉಜ್ಜಿ ಅಷ್ಟೇ ನಾ ಎಂದು ಕೇಳಿದ್ದರು.
ನನಗೆ ಹಲ್ಲು ಉಜ್ಜಿಸಿದ ಬಳಿಕ ಅವರು ಶೇವಿಂಗ್ ಮಾಡಿಕೊಳ್ಳುತ್ತಿದ್ದರು. ಆಗ ನಾನು ಮತ್ತೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಮತ್ತೆ ಏನಾಯಿತು ಮಗನೇ ಎಂದು ಕೇಳಿದರು. ನಾನು ಮತ್ತೆ ಬಾತ್ ರೂಮಿಗೆ ಹೋಗಬೇಕೆಂದು ಹೇಳಿದೆ. ಆಗ ಅವರು ನನ್ನನ್ನು ಒಂದು ಕೈಯಲ್ಲಿ ಎತ್ತಿ ಬೇಸನ್‍ನಲ್ಲಿ ಹಾಕಿ ಮಾಡ್ಕೋ ಎಂದು ಹೇಳಿದ್ದರು.
2-3 ಗಂಟೆಯ ನಂತರ ಅಮ್ಮ ಶಾಪಿಂಗ್ ನಿಂದ ವಾಪಾಸ್ ಬಂದರು. ಅಮ್ಮ ನನ್ನನ್ನು ಬಿಟ್ಟು ಹೋಗಿದ್ದಾರೆಂದು ನನಗೆ ಕೋಪ ಬಂದಿತ್ತು. ಅಮ್ಮ ನನ್ನ ಬಿಟ್ಟು ಎಲ್ಲಿ ಹೋದೆ ಎಂದು ಕೇಳುವ ಮೊದಲು ಅಪ್ಪ, ‘ಲೇ ಅಮ್ಮವೋ ಇವ್ನ ನನ್ನ ಜೊತೆ ಹತ್ತಿರ ಯಾಕೆ ಬಿಟ್ಟು ಹೋದೆ’ ಎಂದು ಹೇಳಿದ್ದರು. ಆಗಿಂದ ನಾವು ಟ್ರಿಪ್‍ಗೆ ಹೋಗಿದ್ದಾಗ ಬೆಳಗ್ಗೆ ಎದ್ದ ತಕ್ಷಣ ಅಪ್ಪ ಅಮ್ಮನ ಕೈಹಿಡಿದು ಎಲ್ಲಿ ಹೋಗಬೇಡ ಎಂದು ಹೇಳುತ್ತಿದ್ದರು. ಅಮ್ಮ ಅಳುತ್ತಿದ್ದಾರೆ. ಹಾಗಾಗಿ ನಾನು ಈ ಸಂದರ್ಭವನ್ನು ನೆನಪಿಸಿಕೊಂಡಿದ್ದೇನೆ ಎಂದು ಅಭಿಷೇಕ್ ಹೇಳಿದರು.
ತಮ್ಮ ಹಳೆಯ ನೆನಪನ್ನು ಅಭಿಷೇಕ್ ಹಂಚಿಕೊಂಡು ರಾಕ್‍ಲೈನ್ ವೆಂಕಟೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 3 ದಿನಗಳ ಕಾಲ ನಿದ್ದೆಯಿಲ್ಲದೇ ನಮಗೆ ಸಹಾಯ ಮಾಡಿದ್ದಕ್ಕೆ ರಾಕ್‍ಲೈನ್ ಅಂಕಲ್ ತುಂಬಾ ಧನ್ಯವಾದಗಳು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv