ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹೊಸ್ತಿಲಲ್ಲಿ ಇರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಡಿ ಹಾಗೂ ಸಿಬಿಐ ಸಮಸ್ಯೆ ಎದುರಾಗಬಹುದು ಎಂಬ ಕಾರಣ ನೀಡಿ ಕೆಪಿಸಿಸಿ ಪಟ್ಟ ತಪ್ಪಿಸಲು ಕೆಲವು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಶತಾಯಗತಾಯ ಡಿಕೆಶಿಗೆ ಪಟ್ಟ ಕಟ್ಟಲು ಮುಂದಾಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಪಟ್ಟಾಭಿಷೇಕಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಈ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಹಿರಿಯ ನಾಯಕರು, ಪ್ರಖ್ಯಾತ ವಕೀಲರುಗಳಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರಿಂದ ಡಿಕೆ ಶಿವಕುಮಾರ್ ಕುರಿತದ ವರದಿ ಕೇಳಿದ್ದಾರೆ. ಐಟಿ, ಇಡಿ ಹಾಗೂ ಸಿಬಿಐ ನಿಂದ ಮುಂದಿನ ದಿನಗಳಲ್ಲಿ ಯಾವುದಾದರು ರೀತಿಯ ತೊಂದರೆ ಆಗುವ ಸಾಧ್ಯತೆ ಇದೆಯಾ? ಕೋರ್ಟ್ ನಲ್ಲಿ ಏನಾಗಬಹುದು ಎಂಬ ಕಾನೂನಾತ್ಮಕ ಅಂಶಗಳನ್ನೊಳಗೊಂಡ ವರದಿಯನ್ನ ಅವರಿಬ್ಬರು ನೀಡಲಿದ್ದಾರೆ ಎನ್ನಲಾಗಿದೆ.
Advertisement
Advertisement
ಕೆಪಿಸಿಸಿ ಅಧ್ಯಕ್ಷರಾದರು ಮುಂದೆ ಏನಾದರು ಸಮಸ್ಯೆ ಎದುರಾಗಬಹುದಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವ ಉದ್ದೇಶದಿಂದ ಈ ವರದಿ ಕೇಳಲಾಗಿದೆ. ಆ ವರದಿ ಆಧರಿಸಿಯೆ ಡಿಕೆಶಿ ಪಟ್ಟಾಭಿಷೇಕದ ಮುಹೂರ್ತ ನಿರ್ಧಾರವಾಗಲಿದೆ. ಆದ್ದರಿಂದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ನೀಡುವ ವರದಿ ಮೇಲೆಯೇ ಡಿಕೆ ಶಿವಕುಮಾರ್ ಪಟ್ಟಾಭಿಷೇಕದ ಮುಹೂರ್ತ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement