ಇದೇ ಮೊದಲ ಬಾರಿಗೆ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ಬ್ಯಾಡ್ ಮ್ಯಾನರ್ಸ್ (Bad Manners) ಸಿನಿಮಾ ಮೂಡಿ ಬರುತ್ತಿದ್ದು, ಈ ಸಿನಿಮಾದಲ್ಲಿ ಅಭಿಷೇಕ್ (Abhishek Ambarish) ವಿಭಿನ್ನ ರೀತಿಯ ಪಾತ್ರವನ್ನು ಮಾಡುತ್ತಿದ್ದಾರೆ. ಅದು ಪೊಲೀಸ್ ಅಧಿಕಾರಿಯ ಪಾತ್ರವಾಗಿದ್ದರೂ, ಮ್ಯಾನರಿಸಂ ಮಾತ್ರ ಹೊಸ ಬಗೆಯಲ್ಲಿ ಇದೆಯಂತೆ. ಅಭಿಷೇಕ್ ನಿರ್ವಹಿಸುವ ಪಾತ್ರಕ್ಕೆ ರುದ್ರ ಎಂದು ಹೆಸರಿಡಲಾಗಿದ್ದು, ಹೆಸರಿಗೆ ತಕ್ಕಂತೆ ರೌದ್ರಾವತಾರವೇ ಪ್ರಧಾನವಾಗಿದೆಯಂತೆ.
Advertisement
ಒಂದೂವರೆ ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಸೂರಿ (Suri). ಈಗಾಗಲೇ ಸಿನಿಮಾದ ಶೀರ್ಷಿಕೆಯಿಂದಾನೇ ಕುತೂಹಲ ಮೂಡಿಸಿರುವ ಸಿನಿಮಾದ ಟೀಸರ್ (Teaser) ಅನ್ನು ಅಭಿಷೇಕ್ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಮಾಡಿದೆ ಚಿತ್ರತಂಡ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಕೆಲ ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಇದೇ ತಿಂಗಳು 8 ರಿಂದ ಶೂಟಿಂಗ್ ಶುರುವಾಗಲಿದ್ದು, ಸಂಪೂರ್ಣ ಶೂಟಿಂಗ್ ಮುಗಿಯಲಿದೆಯಂತೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್ಡೇ ರಚ್ಚು ಅಂದ್ರು ಫ್ಯಾನ್ಸ್
Advertisement
Advertisement
ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ರಿಲೀಸ್ ಆದ ಟೀಸರ್ ನಲ್ಲಿ ಅಭಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆಯನ್ನು ಅದು ಪಡೆದಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಜೊತೆ ರಚಿತಾ ರಾಮ್ (Rachita Ram) ಮತ್ತು ಪ್ರಿಯಾಂಕಾ ಕುಮಾರ್ ನಟಿಸಿದ್ದು, ಸುಧೀರ್ ಅವರ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.