-ಮುದ್ದು ನಾಯಿ ಮರಿಗಳಿಗೆ ಊಟ ಮಾಡಿಸಿದ ಅಂಬಿ ಪುತ್ರ
ಬೆಂಗಳೂರು: ತನ್ನ ಒಡೆಯ ಅಂಬಿಯನ್ನು ನಾಲ್ಕು ದಿನಗಳಿಂದ ನೋಡದೇ ಅನ್ನ, ನೀರು ತ್ಯಜಿಸಿ ಸೊರಗಿದ್ದ ಕನ್ವರ್ ಲಾಲ್ ಮತ್ತು ಬುಲ್ಬುಲ್ ನಾಯಿಗಳನ್ನು ಸಮಾಧಾನ ಮಾಡಿ ಆಹಾರ ತಿನ್ನಿಸೋ ಕೆಲಸವನ್ನು ಇಂದು ಅಂಬಿಯ ಮುದ್ದಿನ ಮಗ ಅಭಿಷೇಕ್ ಮಾಡಿದ್ದಾರೆ.
ಮನೆ ಮುಂದೆ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಮೈದಡವಿಸಿ, ಅವುಗಳನ್ನು ಸಮಾಧಾನ ಮಾಡೋ ಕೆಲಸ ಮಾಡಿದ್ದಾರೆ. ಕನ್ವರ್ ಮತ್ತು ಬುಲ್ ಬುಲ್ ಇಂದು ಅಭಿಯನ್ನು ನೋಡಿದೊಡನೆ ಮೈ ಮೇಲೆ ಎಗರಿ, ಖುಷಿ ಹಂಚಿಕೊಂಡವು. ‘ಕುತ್ತೇ…ಕನ್ವರ್ ನಹೀ…ಕನ್ವರ್ ಲಾಲ್ ಬೋಲೋ’, ”ಏ ಬುಲ್ ಬುಲ್…ಮಾತಾಡಕ್ಕಿಲ್ವಾ..’ ರೆಬೆಲ್ ಸ್ಟಾರ್ ಅಂಬರೀಶ್ ಅವರ ಫೇಮಸ್ ಡೈಲಾಗ್ಗಳು. ಅಂಬರೀಶ್ ಕೆರಿಯರ್ ಗೆ ಹೊಸ ತಿರುವು ನೀಡಿದ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಡೈಲಾಗ್ ಗಳನ್ನ ತಮ್ಮ ಮುದ್ದಿನ ನಾಯಿಗಳ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ‘ಕನ್ವರ್’, ‘ಬುಲ್ ಬುಲ್’ ಶ್ವಾನಗಳ ಹೆಸರಿನ ಇತಿಹಾಸ
Advertisement
Advertisement
ಅಂಬರೀಶ್ ಮನೆಯಲ್ಲಿರುವ ನಾಯಿಯ ಹೆಸರು ‘ಕನ್ವರ್ ಲಾಲ್’. ಪುಟ್ಟ ಮರಿಯಿಂದಲೂ ಅಂಬಿ ಮನೆಯಲ್ಲೇ ಸ್ಥಾನ ಪಡೆದಿರುವ ‘ಕನ್ವರ್ ಲಾಲ್’ ಅಂಬರೀಶ್ ಗೆ ಅತ್ಯಂತ ಪ್ರೀತಿ ಪಾತ್ರದ ನಾಯಿಯಾಗಿತ್ತು. ಇದಕ್ಕೊಂದು ಜೋಡಿ ಬೇಕು ಅಂತ ಮೂರು ವರ್ಷದ ಹಿಂದೆ ತಮ್ಮ ಮನೆಗೆ ಅಂಬರೀಶ್ ಹೊಸ ನಾಯಿ ತಂದರು. ಅದಕ್ಕೆ ಅಂಬಿ ನಾಮಕರಣ ಮಾಡಿದ್ದು ‘ಬುಲ್ ಬುಲ್’ ಅಂತ. ಪ್ರತಿನಿತ್ಯ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಖುಷಿ ಖುಷಿಯಿಂದ ಮನೆ ತುಂಬ ಓಡಾಡುವುದನ್ನ, ಮೈಮೇಲೆ ಬೀಳೋದನ್ನು ನೋಡಿ ಅಂಬರೀಶ್ ಖುಷಿ ಆಗುತ್ತಿದ್ದರು. ಇದೀಗ ಅಂಬಿ ಸ್ಥಾನವನ್ನು ಪುತ್ರ ಅಭಿ ತುಂಬಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv