ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ (King) ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ಯಾವುದೇ ಕಳಂಕ ಇಲ್ಲದೆ ನಿರಪರಾಧಿಯಾಗಿ ದರ್ಶನ್ ಆಚೆ ಬರಲಿ: ಚಂದನ್ ಶೆಟ್ಟಿ
ಅಮಿತಾಭ್ ಬಚ್ಚನ್‌ಗೆ ಬಾಲಿವುಡ್‌ನಲ್ಲಿ ಸಕ್ಸಸ್ ಸಿಕ್ಕಂತೆ. ಪುತ್ರ ಅಭಿಷೇಕ್‌ಗೆ ಯಶಸ್ಸು ಸಿಗಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಬಿಗ್ ಬಿ ಪುತ್ರ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಹೊಸ ಪಾತ್ರಗಳ ಪ್ರಯೋಗದಲ್ಲಿದ್ದಾರೆ. ಸಕ್ಸಸ್‌ಗಾಗಿ ಖಳನಟನಾಗಲು ಮುಂದಾಗಿದ್ದಾರೆ.
ಶಾರುಖ್ ಖಾನ್ ನಿರ್ಮಿಸಿ, ನಟಿಸುತ್ತಿರುವ ‘ಕಿಂಗ್’ ಸಿನಿಮಾದಲ್ಲಿ ಮಗಳು ಸುಹಾನಾ ಖಾನ್‌ರನ್ನು ಲಾಂಚ್ ಮಾಡ್ತಿದ್ದಾರೆ. 200 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ಸಿನಿಮಾದಲ್ಲಿ ಅಭಿಷೇಕ್‌ಗೆ ಉತ್ತಮ ಪಾತ್ರವಿದೆಯಂತೆ. ವಿಲನ್ ಆದ್ರೂ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಸುಜಯ್ ಘೋಷ್ ನಿರ್ದೇಶನದ ‘ಕಿಂಗ್’ ಚಿತ್ರಕ್ಕೆ ಈ ವರ್ಷದ ಕೊನೆಯಲ್ಲಿ ಚಾಲನೆ ಸಿಗಲಿದೆ. ನಾಯಕಿಯಾಗಿ ಬರುತ್ತಿರುವ ಸುಹಾನಾ ಖಾನ್ (Suhana Khan) ತಮ್ಮ ಪಾತ್ರದ ತಯಾರಿಯಲ್ಲಿದ್ದಾರೆ. ಅದಕ್ಕಾಗಿ ಸೂಕ್ತ ತರಬೇತಿ ಕೂಡ ಪಡೆಯುತ್ತಿದ್ದಾರೆ. ಒಟ್ನಲ್ಲಿ ಶಾರುಖ್, ಸುಹಾನಾ, ಅಭಿಷೇಕ್‌ರನ್ನು ಬೆಳ್ಳಿಪರದೆಯಲ್ಲಿ ಒಟ್ಟಾಗಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.