ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

Public TV
2 Min Read
490977 abhi aish

ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ಪತಿಯ ಸಿನಿಮಾ ವೃತ್ತಿ ಜೀವನದ ಬಗೆಗೆ ಹೊಂದಿದ್ದ ಚಿಂತೆಯಿಂದ ನಿರಾಳವಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಯಾವುದೇ ಸಿನಿಮಾಗಳಿರಲಿಲ್ಲ. ಇದರಿಂದ ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತೊ ಎಂಬ ಚಿಂತೆ ಐಶ್ವರ್ಯರನ್ನು ಕಾಡುತ್ತಿತ್ತು. ಆದ್ರೆ ಈಗ ಐಶ್ವರ್ಯ ಚಿಂತೆ ದೂರವಾಗಿದ್ದು, ಅಭಿಷೇಕ್ ಬಚ್ಚನ್ ನಿರ್ಮಾಪಕ ಪ್ರಿಯದರ್ಶನ್ ನಿರ್ಮಾಣದ ‘ಬಚ್ಚನ್ ಸಿಂಹ’ ಸಿನಿಮಾಗೆ ಸಹಿ ಹಾಕಿದ್ದಾರೆ. ಬಿಗ್ ಬಜೆಟ್ ಹೊಂದಿರುವ ಸಿನಿಮಾ ಇದಾಗಿದ್ದು, 11 ವರ್ಷದ ಬಳಿಕ ಅಭಿಷೇಕ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಬಚ್ಚನ್ ಸಿಂಹ ಚಿತ್ರದ ಚಿತ್ರೀಕರಣ ಜೂನ್ 5ರಿಂದ ಆರಂಭಗೊಳ್ಳಲಿದೆ.

aishwarya rai 2

ಸಿನಿಮಾದ ಸ್ಕ್ರಿಪ್ಟ್ ತಯಾರಾಗಿದ್ದು, ಇದೂವರೆಗೂ ಫೈನಲ್ ಆಗಿಲ್ಲ ಅಂತಾ ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ಅಭಿಷೇಕ್ ಜೊತೆಯಾಗಿ ನಟಿಸುವ ನಟಿ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಿರ್ಮಾಪಕ ಪ್ರಿಯದರ್ಶನ್ ಅವರ 36 ವರ್ಷಗಳ ಸಿನಿ ಕೆರಿಯರ್‍ನ 93ನೇ ಸಿನಿಮಾ ಇದಾಗಿದ್ದು, ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.

ನಿರ್ಮಾಪಕ ರಾಜೇಶ್ ಆರ್. ಸಿಂಹ ತಮ್ಮ ಮುಂದಿನ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಇಬ್ಬರಿಗೂ ಜೊತೆಯಾಗಿ ನಟಿಸುವ ಆಫರ್ ನೀಡಿದ್ದಾರೆ. ಆದ್ರೆ ಐಶ್ವರ್ಯ ಪತಿಯೊಂದಿಗೆ ನಟಿಸಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಐಶ್ ಮತ್ತು ಅಭಿಷೇಕ್ ಸಿನಿಮಾ ಒಪ್ಪಿಕೊಂಡರೆ 8 ವರ್ಷಗಳ ಬಳಿಕ ತೆರೆಯ ಮೇಲೆ ಒಂದಾಗಲಿದ್ದಾರೆ. 2010ರಲ್ಲಿ ಈ ಜೋಡಿ ‘ರಾವಣ್’ ಸಿನಿಮಾದಲ್ಲಿ ಕೊನೆಯ ಬಾರಿ ಜೊತೆಯಾಗಿ ನಟಿಸಿದ್ದರು.

abhishek aishwarya insta

ಐಶ್ವರ್ಯ ಪತಿಯನ್ನು ಸಿನಿಮಾಗೆ ಕಮ್ ಬ್ಯಾಕ್ ಮಾಡಿಸಲು ಪ್ರತಿಯೊಂದು ಆಫರ್ ಬಂದಾಗಲೂ ತಾವೇ ಖುದ್ದು ಸ್ಕ್ರಿಪ್ಟ್ ಚೆಕ್ ಮಾಡಿ ಅಂತಿಮಗೊಳಿಸುತ್ತಿದ್ದಾರೆ. ಈ ಹಿಂದೆ ಐಶ್ವರ್ಯ ಪತಿಗೆ ಸಿನಿಮಾದ ಅವಕಾಶ ಕೋರಿ ಸಲ್ಮಾನ್ ಖಾನ್ ಮಾಜಿ ಮ್ಯಾನೇಜರ್ ರೇಶ್ಮಾ ಶೆಟ್ಟಿ ಮತ್ತು ಹಲವು ನಿರ್ದೇಶಕರ ಜೊತೆ ಮಾತನಾಡಿದ್ದರು ಎಂದು ಪತ್ರಿಕೆಗಳು ಪ್ರಕಟ ಮಾಡಿದ್ದವು.

ಸದ್ಯ ಐಶ್ವರ್ಯ ರೈ `ಫೆನ್ನಿ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರ ಈಗಾಗಲೇ ಸಾಕಷ್ಟು ಕೂತುಹಲವನ್ನು ಹುಟ್ಟುಹಾಕಿದೆ. ಫೆನ್ನಿ ಖಾನ್ ಚಿತ್ರದಲ್ಲಿ ಅನಿಲ್ ಕಪೂರ್, ರಾಜ್‍ಕುಮಾರ್ ರಾವ್, ದಿವ್ಯಾ ದತ್ತ ಸೇರಿದಂತೆ ಹಲವು ಸ್ಟಾರ್ ಗಳು ಬಣ್ಣ ಹಚ್ಚಿದ್ದಾರೆ. ಅತುಲ್ ಮಂಜ್ರೆಕರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಅರ್ಜುನ್ ಕಪೂರ್, ಪ್ರೇರಣಾ ಅರೋರಾ, ಭೂಷಣ್ ಕುಮಾರ್ ಮತ್ತು ರಾಕೇಶ್ ಮೆಹ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಫೆನ್ನಿ ಖಾನ್ ಇದೇ ವರ್ಷ ಜೂನ್ 15ರಂದು ತೆರೆಕಾಣುವ ಸಾಧ್ಯತೆಗಳಿವೆ. ಐಶ್ವರ್ಯ ಮಾವ ಅಮಿತಾಬ್ ಬಚ್ಚನ್ ಕೂಡ ಟಾಲಿವುಡ್‍ನ ಸೈರಾ ನರಸಿಂಹ ರೆಡ್ಡಿ, ಬಾಲಿವುಡ್ ನ ‘ಥಗ್ಸ್ ಆಫ್ ಹಿಂದೊಸ್ಥಾನ’ ಸೇರಿದಂತೆ ಕಲಾತ್ಮಕ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

AISH 2

Share This Article
Leave a Comment

Leave a Reply

Your email address will not be published. Required fields are marked *