ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್ (Abhishek), ಮಾಡೆಲ್ ಅವಿವಾ (Aviva) ಜೂನ್ 16 ರಂದು ಮಂಡ್ಯದ ಜನತೆಗೆ ಬೀಗರೂಟ (Beegarota)ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮದುವೆ ಮತ್ತು ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿರುವ ಕಾರಣದಿಂದಾಗಿ ಬೀಗರೂಟವನ್ನು ಮಂಡ್ಯದಲ್ಲಿ ಏರ್ಪಡಿಸಲಾಗಿದೆ.
Advertisement
ಈ ಹಿಂದೆ ಮಂಡ್ಯಕ್ಕೆ (Mandya) ಪ್ರಧಾನಿ ನರೇಂದ್ರ ಮೋದಿ ಬಂದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಅಲ್ಲಿಯೇ ಬೀಗರೂಟ ನಡೆಯಲಿದೆ. ಇದನ್ನೂ ಓದಿ:ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್
Advertisement
Advertisement
ಬೀಗರೂಟಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಟೆಂಟ್ ಹಾಕುವಂತಹ ಕಾರ್ಯ ನಡೆದಿದ್ದು, ಸುಮಲತಾ ಅಂಬರೀಶ್ ಇಂದು ಅದರ ಪರಿಶೀಲನೆ ಕೂಡ ಮಾಡಿದ್ದಾರೆ. ಬೀಗರೂಟಕ್ಕೆ ಭರ್ಜರಿ ಬಾಡೂಟವೇ ಇರಲಿದ್ದು, ಪಕ್ಕಾ ಮಂಡ್ಯ ಶೈಲಿಯಲ್ಲಿ ಆಹಾರವನ್ನು ಸಿದ್ಧ ಪಡಿಸಲಾಗುತ್ತದೆಯಂತೆ. ಮುದ್ದೆಯೊಂದಿಗೆ ಭರ್ಜರಿ ಮಾಂಸದೂಟ ಕೂಡ ಜೊತೆಯಾಗಲಿದೆ. ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ ಇರಲಿದೆ.
Advertisement
ಬೀಗರ ಊಟದ ಸಿದ್ಧತೆಯನ್ನು ಅಂಬರೀಶ್ (Ambareesh) ಕುಟುಂಬದ ಆಪ್ತ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (RockLine Venkatesh)ಪರಿಶೀಲನೆ ನಡೆಸಿದರು. ಈ ವೇಳೆ ಎಲ್ಲರಿಗೂ ಸಲಹೆ ಸೂಚನೆಯನ್ನು ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ರಾಕ್‌ಲೈನ್ ವೆಂಕಟೇಶ್ ಅಂಬರೀಶ್‌ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನು ಬೀಗರ ಊಟದ ಮೆನುವಾಗಿ ಮಾಡಲಾಗುತ್ತದೆ. ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಇದ್ದು, ಬೆಳಿಗ್ಗೆ 11ಗಂಟೆಯಿಂದಲೇ ಊಟದ ಆರಂಭವಾಗಲಿದೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸುವುದು ಕುಟುಂಬಸ್ಥರ ಆಸೆ ಇದೆ, ಅದರಂತೆ ಅಭಿಷೇಕ್ ಬೀಗರ ಊಟ ಮಂಡ್ಯದಲ್ಲೇ ಮಾಡಲಾಗ್ತಿದೆ. ಮಂಡ್ಯ ಜಿಲ್ಲೆಯ ಬಾಣಸಿಗರಿಂದಲೇ ಬಾಡೂಟವನ್ನು ತಯಾರು ಮಾಡಿಸಲಾಗುತ್ತದೆ. ಅಂಬರೀಶ್ ಅವರಿಗೆ ಪ್ರಿಯವಾದ ಕೈಮಾ, ಬೋಟಿ ಗೊಜ್ಜು, ಮಟನ್ ಸೇರಿದಂತೆ ಮಂಡ್ಯ ಶೈಲಿಯಲ್ಲೇ ಅಡುಗೆ ಇರಲಿದೆ. ವಧು ವರರಿಗೆ ಕೇಕ್, ಹಾರ – ಬೊಕ್ಕೆ ತರದೆ ಜನರು ಬಂದು ಆಶೀರ್ವಾದ ಮಾಡಿದರೆ ಸಾಕು ಎಂದು ಅಭಿ ಮನವಿ ಮಾಡಿದ್ದಾರೆ ಎಂದು ರಾಕ್‌ಲೈನ್ ಹೇಳಿದರು.