ನಟ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಇಂದು ಅವಿವಾ ಬಿದ್ದಪ್ಪ ಅವರೊಂದಿಗೆ ಎಂಗೇಜ್ ಆಗಿದ್ದಾರೆ. 5 ವರ್ಷಗಳ ತಮ್ಮ ಪ್ರೀತಿಗೆ ಇಂದು ಉಂಗುರದ ಮುದ್ರೆ ಒತ್ತಿದ್ದಾರೆ. ಅಭಿಷೇಕ್ (Abhishek Ambreesh) ಮತ್ತು ಅವಿವಾ (Aviva Biddappa) ಲವ್‌ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?
ಅಂಬಿ ಪುತ್ರ ಅಭಿಷೇಕ್ 2019ಕ್ಕೆ `ಅಮರ್’ (Amar Film) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಿ ಎಂಟ್ರಿ ಕೊಟ್ರು. ಈ ಚಿತ್ರದ ಮುಂಚೆಯೇ ಅವಿವಾ(Aviva) ಮತ್ತು ಅಭಿಷೇಕ್ (Abhishek) ಗೆಳೆತನವಿತ್ತು. ಆ ಗೆಳೆತನ ಪ್ರೀತಿಗೆ ತಿರುಗಿ, ಇಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. 5 ವರ್ಷಗಳ ಪ್ರೀತಿಗೆ ಇಂದು ಉಂಗುರ ತೊಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ, ಒಪ್ಪಿಗೆ ಮೇರೆಗೆ ಇಂದು ಈ ಜೋಡಿ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ: ಅಂಬಿ ಪುತ್ರನ ಎಂಗೇಜ್‌ಮೆಂಟ್‌ಗೆ ಆಗಮಿಸಿ, ಶುಭಕೋರಿದ ಯಶ್ ದಂಪತಿ
ಇದೀಗ `ಬ್ಯಾಡ್ ಮ್ಯಾನರ್ಸ್’ ಮತ್ತು `ಕಾಳಿ’ ಚಿತ್ರದ ಜೊತೆ ನಿರ್ದೇಶಕ ಎಸ್.ಮಹೇಶ್ ಕುಮಾರ್ ಜೊತೆಗಿನ ಸಿನಿಮಾ ಅಭಿಷೇಕ್ ಕೈಯಲ್ಲಿದೆ. ಹಂತ ಹಂತವಾಗಿ ಅಂಬಿ ಪುತ್ರ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ. ಇನ್ನೂ ಫ್ಯಾಷನ್ ಡಿಸೈನರ್ ಕಮ್ ಮಾಡೆಲ್ ಆಗಿ ಅವಿವಾ ಗುರುತಿಸಿಕೊಂಡಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಮತ್ತು ಅಭಿಷೇಕ್ ನಿಶ್ಚಿತಾರ್ಥಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗವೇ ಸಾಕ್ಷಿಯಾಗಿದೆ. ಈ ಮುದ್ದಾದ ಜೋಡಿಗೆ ಇದೀಗ ಯಶ್ ದಂಪತಿ ಮತ್ತು ಆರ್. ಅಶೋಕ್, ಗುರುಕಿರಣ್ ದಂಪತಿ, ನಿರ್ದೇಶಕ ಮಹೇಶ್ ಕುಮಾರ್ ಕೂಡ ಭಾಗಿಯಾಗಿ ಶುಭಹಾರೈಸಿದ್ದಾರೆ.
ಸುಮಲತಾ ಮತ್ತು ಅವಿವಾ ಕುಟುಂಬದ ಜೊತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಹಾಜರಿದ್ದು, ಜೋಡಿಗೆ ಶುಭಹಾರೈಸಿದ್ದಾರೆ. ಇನ್ನೂ ಅಭಿಷೇಕ್ ಮತ್ತು ಅವಿವಾ ಜೋಡಿ ಮುಂದಿನ ವರ್ಷ ಹಸೆಮಣೆ ಏರಲಿದೆ.