ಅಂಬರೀಶ್ ನಿಧನದ ನಂತರ ರಾಜಕಾರಣಕ್ಕೆ ಅವರ ಪುತ್ರ ಅಭಿಷೇಕ್ ಬರುತ್ತಾನೆ ಎಂದು ಹೇಳಲಾಗಿತ್ತು. ಆದರೆ, ಅದರ ಮೊದಲು ಅಂಬಿ ಪತ್ನಿ ಸುಮಲತಾ ಅಖಾಡಕ್ಕೆ ಇಳಿದರು. ಇದೀಗ ಅವರು ಮಂಡ್ಯದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅಭಿಷೇಕ್ ಹೆಸರು ರಾಜಕೀಯ ಕಣದಲ್ಲಿ ಹರಿದಾಡುತ್ತಿದೆ. ಈ ಬಾರಿ ಅಭಿಷೇಕ್ ಅವರು ವಿಧಾನಸಭೆ ಚುನಾವಣೆಗೆ ನಿಲ್ಲಲಿದ್ದಾರೆಂಬ ಸುದ್ದಿಯಾಗಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
Advertisement
ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಮಂಡ್ಯ ಅಥವಾ ಮದ್ದೂರಿನಲ್ಲಿ ಮಗನನ್ನು ಶಾಸಕನನ್ನಾಗಿ ಮಾಡಲಿದ್ದಾರೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, “ಮಗನ ಕುರಿತು ನಾನು ಯಾವ ನಿರ್ಧಾರವನ್ನೂ ತಗೆದುಕೊಂಡಿಲ್ಲ. ಸಿನಿಮಾಗೆ ಬರುವಾಗಲೂ ಅವನು ಸ್ವತಂತ್ರವಾಗಿಯೇ ನಿರ್ಧಾರ ತಗೆದುಕೊಂಡು ಬಂದ. ಯಾವತ್ತೂ ನಾವು ಅವನಿಗೆ ಸಿನಿಮಾಗೆ ಬಾ ಅಂತ ಕರೆಯಲಿಲ್ಲ. ಈಗ ರಾಜಕೀಯಕ್ಕೆ ಬರುವಂತೆ ಹೇಗೆ ಒತ್ತಾಯಿಸಲಿ. ಅದು ಅಭಿಷೇಕ್ ನಿರ್ಧಾರ ಆಗಬೇಕು. ಅವನು ಸಿನಿಮಾಗೆ ಬರುತ್ತಾನೋ ಇಲ್ಲವೋ ಎನ್ನುವುದನ್ನು ಅವನನ್ನೇ ಕೇಳಿ” ಎಂದಿದ್ದಾರೆ ಸುಮಲತಾ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್
Advertisement
ಸುಮಲತಾ ಅವರು ರಾಜಕೀಯಕ್ಕೆ ಬರುವಾಗಲೂ ಇಂಥದ್ದೇ ಮಾತುಗಳನ್ನು ಹೇಳಿದರು. ಕೊನೆಗೆ ಸ್ವಾಭಿಮಾನಿ ಮತದಾರರ ಒತ್ತಾಸೆಯಂತೆ ಸ್ಪರ್ಧಿಸಿದರು. ಅಭಿಷೇಕ್ ನಿರ್ಧಾರ ಕೂಡ ಅದೇ ಮಾದರಿಯಲ್ಲಿರುತ್ತಾ ಕಾದು ನೋಡಬೇಕು.