ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

Public TV
1 Min Read
FotoJet 81

ಅಂಬರೀಶ್ ಅವರ ಹುಟ್ಟು ಹಬ್ಬದ ದಿನದಂದು ಅಭಿಷೇಕ್ ಅಂಬರೀಶ್ ನಟನೆಯ ಎರಡು ಸಿನಿಮಾಗಳ ಫಸ್ಟ್ ಲುಕ್ ರಿಲೀಸ್ ಆಗಿವೆ. ಒಂದು ಸಿನಿಮಾವನ್ನು ಪೈಲ್ವಾನ್ ಸಿನಿಮಾ ಖ್ಯಾತಿಯ ಕೃಷ್ಣ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ : ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

abhishek ambareesh 2

ಕೃಷ್ಣ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಕಾಳಿ ಎಂದು ಹೆಸರಿಡಲಾಗಿದೆ. ಆದರೆ, ಮಹೇಶ್ ಕುಮಾರ್ ತಮ್ಮ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಹಾಗಾಗಿ ಇಂದು ಬಿಡುಗಡೆಯಾದ ಫಸ್ಟ್ ಲುಕ್ ನಲ್ಲಿ ಎಎ 04 ಎಂದಷ್ಟೇ ನಮೂದಿಸಿದ್ದಾರೆ. ಅಂದರೆ, ಅಭಿಷೇಕ್ ಅವರ ನಾಲ್ಕನೇ ಸಿನಿಮಾ ಇದಾಗಿದೆ. ಈ ಸಿನಿಮಾ ಕೂಡ ವಿಭಿನ್ನ ಕಥೆಯನ್ನು ಒಳಗೊಂಡಿದೆ ಎಂದಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

abhishek ambrish

ಇಂದು ಬಿಡುಗಡೆ ಆಗಿರುವ ‘ಎಎ 04’ ಸಿನಿಮಾದ ಫಸ್ಟ್ ಲುಕ್ ರಕ್ತಸಿಕ್ತ ಮುಖವನ್ನು ಒಳಗೊಂಡಿದೆ. ಕೇವಲ ಅರ್ಧ ಮುಖ ಮಾತ್ರ ಕಾಣುತ್ತಿದೆ. ಕ್ರೌರ್ಯವೇ ಮುಖದಲ್ಲಿ ಎದ್ದು ಕಾಣುತ್ತಿದೆ. ಹಾಗಾಗಿ ಇದೊಂದು ರಕ್ತಕ್ರಾಂತಿಯ ಚಿತ್ರವಾ ಎನ್ನುವ ಕುತೂಹಲ ಕೂಡ ಮೂಡಿದೆ. ಸದ್ಯಕ್ಕೆ ಈ ಸಿನಿಮಾ ಟೇಕಾಫ್ ಆಗದೇ ಇದ್ದರೂ, ವಿಭಿನ್ನ ರೀತಿಯಲ್ಲಿ ಲಾಂಚ್ ಮಾಡಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರಂತೆ. ಇದನ್ನೂ ಓದಿ : ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

abhishek ambarish 3

ಮಹೇಶ್ ಕುಮಾರ್ ಈ ಹಿಂದೆ ನೀನಾಸಂ ಸತೀಶ್ ಗಾಗಿ ಒಂದು ಸಿನಿಮಾ, ಶ್ರೀಮುರುಳಿಗಾಗಿ ಒಂದು ಸಿನಿಮಾ ಮಾಡಿದ್ದಾರೆ. ಇದು ಅವರ ಮೂರನೇ ಸಿನಿಮಾ. ಮೂರನೇ ಚಿತ್ರಕ್ಕೆ ಅಭಿಷೇಕ್ ಅಂಬರೀಶ್ ಅವರ ಹುಟ್ಟು ಹಬ್ಬದ ದಿನದಂದು ಮುಹೂರ್ತ ಆಗಲಿದೆಯಂತೆ. ಅಲ್ಲಿಂದಲೇ ತಮ್ಮ ಸಿನಿಮಾದ ಕೆಲಸವನ್ನು ಅಧಿಕೃತವಾಗಿ ಶುರು ಮಾಡಲಿದ್ದಾರಂತೆ ನಿರ್ದೇಶಕರು.

Share This Article
Leave a Comment

Leave a Reply

Your email address will not be published. Required fields are marked *