35 ಕೋಟಿ ಬಜೆಟ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ : ಕ್ರಾಂತಿಕಾರಿ ಪಾತ್ರದಲ್ಲಿ ಯಂಗ್ ರೆಬಲ್

Public TV
1 Min Read
abhishek ambareesh 2

ಅಂಬರೀಶ್ ಅವರ ಹುಟ್ಟು ಹಬ್ಬದ ದಿನದಂದು ಅಭಿಷೇಕ್ ಅಂಬರೀಶ್ ಅವರ ಎರಡು ಚಿತ್ರಗಳ ಫಸ್ಟ್ ಲುಕ್ ರಿಲೀಸ್ ಆಗಿವೆ. ಒಂದು ಸಿನಿಮಾಗೆ ಪೈಲ್ವಾನ್ ಚಿತ್ರ ಖ್ಯಾತಿಯ ಕೃಷ್ಣ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ಮಹೇಶ್ ಕುಮಾರ್ ಸಿನಿಮಾನೇ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

abhishek ambareesh 3

ಅಭಿಷೇಕ್ ಅಂಬರೀಶ್ ಅವರ ನಾಲ್ಕನೇ ಸಿನಿಮಾ ಇದಾಗಿದ್ದು,  ಈ ಚಿತ್ರದಲ್ಲಿ ಅಭಿಷೇಕ್ ಕ್ರಾಂತಿಕಾರಿಯೊಬ್ಬನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ಯುದ್ಧ ಸನ್ನಿವೇಶ ಕೂಡ ಇದೆಯಂತೆ. ಹಾಗಾಗಿ ಅಂದಾಜು 35 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆ ಎನ್ನುವ ಸುದ್ದಿಯಿದೆ. ನಿನ್ನೆ ಫಸ್ಟ್ ಲುಕ್ ರಿಲೀಸ್ ಆಗಿದ್ದರೂ, ಈ ಸಿನಿಮಾಗೆ ಅಕ್ಟೋಬರ್ 3 ರಂದು ಅಧಿಕೃತ ಚಾಲನೆ ಸಿಗಲಿದೆ. ಅಂದು ಅಭಿಷೇಕ್ ಹುಟ್ಟು ಹಬ್ಬ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

abhishek ambarish 3

ಈ ಚಿತ್ರಕ್ಕಾಗಿ 135 ದಿನಗಳ ಶೂಟಿಂಗ್ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಮಹೇಶ್. ಒಂದು ಕಾಲ ಘಟ್ಟದಲ್ಲಿ ನಡೆಯುವ ಹೋರಾಟಗಾರನೊಬ್ಬನ ಕಥೆ ಇದಾಗಿದ್ದರಿಂದ, ಅದ್ಧೂರಿ ಬಜೆಟ್ ಮತ್ತು ಹೆಸರಾಂತ ತಾರಾಗಣ ಈ ಚಿತ್ರದಲ್ಲಿ ಇರಲಿದೆಯಂತೆ. ಮದಗಜ ಸಿನಿಮಾದ ನಂತರ ಮಹೇಶ್ ಕುಮಾರ್ ಈ ಸಿನಿಮಾ ಕೈಗೆತ್ತಿಕೊಂಡಿದ್ದರಿಂದ, ಮದಗಜ ಸಿನಿಮಾದಷ್ಟೇ ಅದ್ಧೂರಿತನ ಇರಲಿದೆಯಂತೆ.

Share This Article