ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಹಸೆಮಣೆಗೆ ಏರುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಷೇಕ್ ಅಂಬರೀಶ್(Abhishek Ambareesh) ಎಂಗೇಜ್‌ಮೆಂಟ್ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿತ್ತು. ಗುಟ್ಟಾಗಿ ಎಂಗೇಜ್ ಆಗಲಿದ್ದಾರೆ ಎಂಬ ಅಂತೆ ಕಂತೆ ಸುದ್ದಿ ಹೈಪ್ ಕ್ರಿಯೇಟ್ ಮಾಡಿತ್ತು. ಈಗ ಎಲ್ಲಾ ಸುದ್ದಿಗೂ ಸುಮಲತಾ ಅಂಬರೀಶ್ (Sumalatha Ambareesh) ಇದೀಗ ಬ್ರೇಕ್ ಹಾಕಿದ್ದಾರೆ. ಮಗನ ಮದುವೆಯ ಬಗ್ಗೆ ಕ್ಲ್ಯಾರಿಟಿ ಕೊಟ್ಟದ್ದಾರೆ.
Advertisement
ಚಂದನವನದ ಕಲಿಯುಗ ಕರ್ಣ ಅಂಬರೀಶ್ (Actor Ambareesh) ಇಹಲೋಕ ತ್ಯಜಿಸಿ ನಾಲ್ಕು ವರ್ಷಗಳು ಕಳೆದಿದೆ. ಅಂಬರೀಶ್ ಪುಣ್ಯ ತಿಥಿ ಅಂಗವಾಗಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಗ ಅಭಿಷೇಕ್ ಎಂಗೇಜ್‌ಮೆಂಟ್, ಮದುವೆ(Wedding) ಬಗ್ಗೆ ನಟಿ ಕಮ್ ಸಂಸದೆ ಸುಮಲತಾ ಮೌನ ಮುರಿದಿದ್ದಾರೆ.
Advertisement
Advertisement
ಅದೆಲ್ಲಾ ಸುಳ್ಳು ಸುದ್ದಿ ಆ ತರಹದ ಯಾವುದೇ ಬೆಳವಣಿಗೆಯಿಲ್ಲ. ಅಭಿಗೆ ಮದುವೆಯೆಲ್ಲಾ ಅವನ ಚಾಯ್ಸ್, ಅವನಿಗೆ ಬಿಟ್ಟಿದ್ದೀನಿ. ಒಳ್ಳೆಯ ವಿಷಯಗಳಾಗ್ಲಿ ಆದಾಗ ಖಂಡಿತಾ ತಿಳಿಸ್ತಿನಿ. ಇನ್ನೂ ನಿರ್ಧಾರ ಅವನಿಗೆ ಬಿಟ್ಟಿದ್ದು ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 11ರಂದು ಅಭಿಷೇಕ್ ಎಂಗೇಜ್‌ಮೆಂಟ್ ಎಂಬ ಗಾಸಿಪ್‌ಗೆ ನಟಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್
Advertisement
ಕೆಲ ದಿನಗಳಿಂದ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಸಕಲ ಸಿದ್ಧತೆ ಗುಟ್ಟಾಗಿ ನಡೆಯುತ್ತಿದೆ. ಡಿಸೆಂಬರ್ 11ಕ್ಕೆ ಮಾಡೆಲ್ ಜೊತೆ ಎಂಗೇಜ್‌ಮೆಂಟ್ ಎಂಬ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೆಲ್ಲಾ ನಟಿ ಕಮ್ ಸಂಸದೆ ಸಮಲತಾ ಸ್ಪಷ್ಟಪಡಿಸಿದ್ದಾರೆ. ಇನ್ನೂ ನಟ ಅಭಿಷೇಕ್ ʻಬ್ಯಾಡ್ ಮ್ಯಾನರ್ಸ್ʼ ಮತ್ತು ʻಕಾಳಿʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.