ಅಭಿಷೇಕ್ ಅಂಬರೀಶ್ (Abhishek Ambareesh)- ಅವಿವಾ (Aviva) ಜೋಡಿ ಮದುವೆಯ ಬೀಗರೂಟಕ್ಕೆ ಮಂಡ್ಯಗೆ (Mandya) ಬಂದಿದ್ದಾರೆ. ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ ಇದೀಗ ಮಂಡ್ಯದ ಬೀಗರೂಟಕ್ಕೆ (Beegaroota) ಪಾಲ್ಗೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಮಂಡ್ಯದಲ್ಲಿ ಅಭಿವಾ ಜೋಡಿಯನ್ನು ನೋಡಲು ಜನ ಸೇರಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಜೂನ್ 5ರಂದು ಅಭಿ- ಅವಿವಾ ಜೋಡಿ ಮದುವೆ ಮುದ್ರೆ ಒತ್ತುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು. ಜೂನ್ 7ರಂದು ಅಭಿವಾ ಆರತಕ್ಷತೆಯನ್ನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೇ ಸೌತ್, ಬಾಲಿವುಡ್ ಸೂಪರ್ ಸ್ಟಾರ್ಸ್ ಕೂಡ ಆಗಮಿಸಿದ್ದರು. ಅಂಬಿ ಸ್ನೇಹ ವರ್ಗವೇ ಅಭಿಷೇಕ್ ವಿವಾಹ ಸಮಾರಂಭದಲ್ಲಿ ಸಾಕ್ಷಿಯಾದರು.
ಮಂಡ್ಯಗೆ ಈಗಾಗಲೇ ಅಭಿವಾ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯದ ಜನತೆ ಬೀಗರೂಟ ಮಾಡುವ ಮೂಲಕ ನಮ್ಮನ್ನ ಹರಿಸಲಿ ಅಂತಾ ಕೇಳಿಕೊಳ್ತೀನಿ. ಮಂಡ್ಯದೂ ಅಂಬರೀಶ್ ಅವರ ನಂಟು ಹೇಗಿದೆ ಅಂತಾ ಎಲ್ಲರಿಗೂ ಗೊತ್ತು. ಎಲ್ಲರೂ ರಾಜಕಾರಣವನ್ನ ಪಕ್ಕಕ್ಕಿಟ್ಟು ಅಂಬರೀಶ್ ಅವರ ಮೇಲಿನ ಪ್ರೀತಿಗೆ ಇವತ್ತು ಎಲ್ಲರೂ ಬೀಗರೂಟಕ್ಕೆ ಬಂದಿದ್ದಾರೆ. ಮಂಡದ್ಯ ಜನರಿಗೆ ಊಟ ಹಾಕಿಸೋದು ನಮ್ಮ ಭಾಗ್ಯ ಎಂದು ಅಂಬಿ ಪುತ್ರ ಅಭಿಷೇಕ್ ಹೇಳಿದ್ದಾರೆ.
ಮಂಡ್ಯದ ಜನ ಸೇರಿರೋದು ರೀತಿ ನೋಡಿ ಅವಿವಾಗೆ ಭಯ ಆಗಿದೆ, ಹೆದರಿದ್ದಾಳೆ. ಅವರು ಯಾವತ್ತು ಇಷ್ಟು ಜನನಾ ಒಟ್ಟಿಗೆ ನೋಡಿಲ್ಲ. ಇನ್ನೂ ಅಂಬರೀಶ್ ಅವರಿಗೆ ಇಷ್ಟದ ಊಟವೇ ಇವತ್ತಿನ ಬೀಗರೂಟದ ಮೆನು ಆಗಿದೆ ಎಂದು ಅಭಿಷೇಕ್ ಮಾತನಾಡಿದ್ದಾರೆ. ಅಂಬಿ ಕುಟುಂಬಕ್ಕೂ ಮಂಡ್ಯಗೂ ನಂಟಿದೆ. ಹಾಗಾಗಿ ಮಂಡ್ಯದ ಜನರಿಗೆ ಅಭಿವಾ ಮದುವೆಯ ಬೀಗರೂಟಕ್ಕೆ ಅದ್ದೂರಿಯಾಗಿ ಸಿದ್ಧತೆ ಮಾಡಲಾಗಿದೆ. ಮಂಡ್ಯದಲ್ಲಿ ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಬಹುದಾಗಿದೆ. ಇಂದು ಬೆಳಗ್ಗೆ 11ರಿಂದ ಔತಣಕೂಟ ಆರಂಭವಾಗಿದೆ.
ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಗೊಳ್ಳುತ್ತಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿ ಕಾರ್ಯಗಳು ಬಿರುಸಿನಿಂದ ನಡೆದಿದೆ. 7 ಟನ್ ಮಟನ್, 8 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟವನ್ನು ಸಿದ್ಧಗೊಳಿಸಲಾಗಿದೆ. ರಾಗಿಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್‌ಕ್ರೀಂ, ಬಾಳೆಹಣ್ಣು ಇದು ಬೀಗರೂಟದ ಮೆನು ಆಗಿದೆ.