ನವದೆಹಲಿ: ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿ ಅಭಿನಂದನ್ ವರ್ಧಮಾನ್ ಬಡ್ತಿ ಪಡೆದಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ಎಂದಾಕ್ಷಣ ಅಂದು ಪಾಕ್‍ಗೆ ದಿಟ್ಟ್ ಉತ್ತರ ಕೊಟ್ಟು ಜೀವಂತ ಮರಳಿದ ಆರೋಚಕ ಕ್ಷಣಗಳು ನೆನಪಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಭಿನಂದನ್ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು. ಅವರಿದ್ದ ಮಿಗ್-21 ಹಾನಿಗೀಡಾದ ಕಾರಣ ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಜಿಗಿದು, ಸಿಕ್ಕಿಬಿದ್ದಿದ್ದರು. ನಂತರ ಪಾಕ್ ಯೋಧರು ಅವರನ್ನು ಬೇರೆಡೆಗೆ ಕರೆದೊಯ್ದಿದ್ದರು.
Advertisement
Advertisement
ಬಂಧನದ ಅವಧಿಯಲ್ಲಿಯೂ ಆತ್ಮಗೌರವ ಕಾಪಾಡಿಕೊಂಡ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ತಲೆ ಎತ್ತಿಯೇ ಗರ್ವದಿಂದ ಎಲ್ಲೆಡೆ ನಡೆಯುತ್ತಿದ್ದ ವೈಖರಿಯನ್ನೂ ಜನರು ಮೆಚ್ಚಿಕೊಂಡಿದ್ದರು. ಅಭಿನಂದನ್ ಅವರಿದ್ದ ವಾಯುಪಡೆಯ 51ನೇ ಸ್ಕ್ವಾರ್ಡನ್‍ಗೂ ಭಾರತ ಸರ್ಕಾರದಿಂದ ವಿಶೇಷ ಮಾನ್ಯತೆ ಸಿಕ್ಕಿತ್ತು. ಪಾಕಿಸ್ತಾನ ವಾಯುಪಡೆಯು ಫೆಬ್ರುವರಿ 27, 2019ರಂದು ಭಾರತದ ಮೇಲೆ ದಾಳಿ ನಡೆಸಲು ಮಾಡಿದ ಪ್ರಯತ್ನವನ್ನು ಹಿಮ್ಮೆಟ್ಟಿಸುವಲ್ಲಿ ಈ ತುಕಡಿಯ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಸಿಬ್ಬಂದಿ ಇದ್ದ ಬಸ್ ಒಂದರ ಮೇಲೆ ಉಗ್ರರು ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತವು ಬಾಲಾಕೋಟ್‍ನಲ್ಲಿದ್ದ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
Advertisement
Advertisement
ಅಭಿನಂದನ್ ವರ್ಧಮಾನ್ ಅವರಿಗೆ ಶೌರ್ಯ ಪ್ರಶಸ್ತಿಯನ್ನೂ ನೀಡಲಾಗಿತ್ತು. ಇದೀಗ ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಆಗಿ ಪದೋನ್ನತಿ ನೀಡಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು