ಬೆಂಗಳೂರು: ಮಿಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಈಗಾಗಲೇ ದೆಹಲಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.
ಅಭಿನಂದನ್ ಅವರಿಗೆ ದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಬಳಿಕ ಅಭಿನಂದನ್ ಮತ್ತೆ ಫೈಟರ್ ಜೆಟ್ ಏರಲು ಸಮರ್ಥರಾ ಅನ್ನುವ ಪರೀಕ್ಷೆಗೆ ಬೆಂಗಳೂರಿಗೆ ಬರಬೇಕಾಗಿದೆ. ಹೀಗಾಗಿ ಸದ್ಯದಲ್ಲೇ ಅಭಿ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
Advertisement
Advertisement
ಪ್ಯಾರಚೂಟ್‍ನಿಂದ ಕೆಳಗೆ ಬಿದ್ದಿರುವುದರಿಂದ ಬೆನ್ನುಹುರಿಗೆ ಬಲವಾದ ಪೆಟ್ಟು ಆಗಿದ್ರೆ ಅಥವಾ ಕಣ್ಣಿಗೆ ತೀವೃತರ ಏಟು ಬಿದ್ದಿದ್ದರೆ ಅಭಿ ಫೈಟರ್ ಜೆಟ್ ಓಡಿಸುವುದು ಅನುಮಾನವಾಗಿದೆ. ದೈಹಿಕ ಪರೀಕ್ಷೆಯನ್ನು ಹೆಚ್‍ಎಎಲ್‍ನಲ್ಲಿರುವ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್‍ನಲ್ಲಿ ಮಾಡಲಾಗುತ್ತದೆ. ಇಲ್ಲಿ ಪ್ಲೈಯಿಂಗ್ ಫಿಟ್‍ನೆಸ್ ರಿಪೋರ್ಟ್ ಪಾಸಿಟಿವ್ ಬಂದರೆ ಅಭಿ ಮತ್ತೆ ಯುದ್ಧವಿಮಾನ ಏರಬಹುದು ಎಂದು ನಿವೃತ್ತ ಏರ್ ಮಾರ್ಷಲ್ ಮುರಳಿ ಹೇಳಿದ್ದಾರೆ.
Advertisement
ಈ ಹಿಂದೆ ಪಾಕ್ ನೆಲದಲ್ಲಿ ಸೆರೆಯಾಗಿದ್ದ ನಚಿಕೇತ್ ದೈಹಿಕ ಸ್ಥಿತಿ ಸ್ಪಂದಿಸದ ಹಿನ್ನೆಲೆಯಲ್ಲಿ ಫೈಟರ್ ಜೆಟ್ ಏರಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭಿನಂದನ್ ಅವರಿಗೂ ಅಂತಿಮವಾದ ವೈದ್ಯಕೀಯ ಪರೀಕ್ಷೆ ನಂತರ ಅವರು ಮತ್ತೆ ಯುದ್ಧವಿಮಾನ ಏರಬಹುದಾ ಎನ್ನುವುದು ತಿಳಿಯುತ್ತದೆ.
Advertisement
https://www.youtube.com/watch?v=iz3m9RH9BMM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv