ನವದೆಹಲಿ: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಹೆಮ್ಮೆ ತಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿನಂದನ್ ಅವರು ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದ್ದಾರೆ.
“ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‍ಗೆ ಧನ್ಯವಾದಗಳು. ನಿಮ್ಮನ್ನು ಬರ ಮಾಡಿಕೊಳ್ಳಲು ಹೆಮ್ಮೆಯಾಗುತ್ತದೆ. ಅಭಿನಂದನ್ ಅವರು 2004ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್ ಪೈಲಟ್ ಆಗಿ ಸೇವೆಗೆ ಸೇರಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.
Advertisement
Many kudos for Wing Commander abhi Varthaman the face of India’s resistance to enemy aggression. Great poise and confidence in face of adversity. We are proud that he received his wings in 2004 and matured as fighter pilot during UPA
— Salman Khurshid (@salman7khurshid) March 2, 2019
Advertisement
ಸರ್ಜಿಕಲ್ ಸ್ಟ್ರೈಕ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರತ ಪಾಕಿಸ್ತಾನ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮಧ್ಯೆ ಖುರ್ಷಿದ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
Advertisement
ಈ ಟ್ವೀಟ್‍ಗೆ ಸದ್ಯ ಜನರು ಸಲ್ಮಾನ್ ಖುರ್ಷಿದ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಯುಪಿಎ ಅವಧಿಯಲ್ಲಿ ಆಗಿರುವ ಹಗರಣಗಳ ಕುರಿತು ಪ್ರಶ್ನಿಸಿದ್ದಾರೆ. ಒಂದೆಡೆ ಹಳೆಯ ಕಾಲದ ಮಿಗ್ 21 ವಿಮಾನವನ್ನು ಇಟ್ಟುಕೊಂಡಿದ್ದಕ್ಕೂ ಯುಪಿಎ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂದು ಹಲವರು ಟ್ವೀಟ್ ಮಾಡಿದರೆ, ಇನ್ನೊದೆಡೆ ಇದು 2019ರ ಅತಿ ಕೆಟ್ಟ ಟ್ವೀಟ್ ಇದು ಎಂದು ಎಂದು ಹೇಳಿದ್ದಾರೆ.
Advertisement
— shilpi tewari (@shilpitewari) March 2, 2019
ಅಭಿನಂದನ್ ಹುಟ್ಟಿದಾಗಲೂ ಯುಪಿಎ ಸರ್ಕಾರವಿತ್ತು ಹಾಗಂತ ಎಲ್ಲ ಕ್ರೆಡಿಟ್ ಇಂದಿರಾ ಗಾಂಧಿಗೆ ಹೋಗುತ್ತಾ ಅಂತ ರೀ-ಟ್ವೀಟ್ ಮಾಡಿ ಟಾಂಗ್ ಕೊಟ್ಟು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
What next? Wing Cmdr Abhinandan was born in 1983, so all credit to Indira Gandhi for his birth?
— Shefali Vaidya. ???????? (@ShefVaidya) March 3, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv