– 150ಕ್ಕೂ ಹೆಚ್ಚು ಕಾಡಾನೆಗಳ ಪೊಗರು ಇಳಿಸಿರುವ ಅಭಿಮನ್ಯು
– ಹುಲಿ ಕಾರ್ಯಾಚಾರಣೆಗೂ ಬೇಕು ಅಭಿಮನ್ಯು
ಮೈಸೂರು: ವಿಶ್ವ ವಿಖ್ವಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಸೆಂಟ್ರಾಆಫ್ ಅಟ್ರಾಕ್ಷನ್ ಎಂದರೆ ಜಂಬೂ ಸವಾರಿ ಮೆರವಣಿಗೆ. ಕಳೆದ ಕಳೆದ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೆ ನೀಡಲಾಗಿದೆ. ಕಳೆದ ಬಾರಿ ಅರಮನೆಯ ಆವರಣದಲ್ಲೇ ಗಜ ಗಾಂಭೀರ್ಯ ನಡಿಗೆಯ ಮೂಲಕವೇ ಯಶಸ್ವಿಯಾಗಿ ಅಭಿಮನ್ಯು ಜಂಬೂ ಸವಾರಿ ಮೆರಣಿಗೆಯನ್ನು ಮುಗಿಸವ ಮೂಲಕ ನಾಡಿನ ಜನರ ಹೆಗ್ಗಳಿಕೆಗೆ ಪಾತ್ರವಾಗಿದ್ದ. ಅಭಿಮನ್ಯು ದಸರಾ ಆನೆ ಮಾತ್ರವಲ್ಲ ಈತನ ಸಾಧನೆ ಸಾಕಷ್ಟು ಇವೆ. ಇದನ್ನೂ ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ
Advertisement
ಸತತ ಏಳು ಬಾರಿ ತಾಯಿ ಚಾಮುಂಡೇಶ್ವರಿಯನ್ನು ಕೂರಿಸಿದ ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಿದ್ದ ಅರ್ಜುನನಿಗೆ 60 ವರ್ಷ ದಾಟಿದ ಕಾರಣ ಒಲ್ಲದ ಮನಸ್ಸಿನಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಬಾರಿ ಆತನನ್ನು ದಸರಾ ಮಹೋತ್ಸವದಿಂದ ದೂರವಿಟ್ಟರು. ಅರ್ಜುನನ ಜಾಗಕ್ಕೆ ತರುವುದು ಎಂದು ಅಧಿಕಾರಿಗಳು ಯೋಚನೆ ಮಾಡುವ ವೇಳೆ ಕಂಡಿದ್ದೆ ಅಭಿಮನ್ಯು. 56 ವರ್ಷದ ಅಭಿಮನ್ಯುವನ್ನು 1970 ರಲ್ಲಿ ಕೊಡಗಿನ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು 2012 ರಿಂದ 2015ರವರೆಗೆ ದಸರಾ ಮಹೋತ್ಸವದ ಜಂಬೂ ಸವಾರಿ ಮೆರಣಿಗೆಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿ ಎಳೆಯು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ. ಅರ್ಜುನ ಆನೆಯ ಜಾಗಕ್ಕೆ ಯಾರನ್ನು ತರುವುದು ಎಂದು ಹುಡುಕುವಾಗ ಕಣ್ಣಿಗೆ ಬಿದ್ದಿದ್ದು ಅಭಿಮನ್ಯು. ಇದಕ್ಕೆ ಕಾರಣ ಇತ ಬಹಳ ಸೌಮ್ಯ ಸ್ವಾಭಾವದ ಆನೆಯಾಗಿದ್ದು, ಇತನ ಬೆನ್ನು ಅಂಬಾರಿ ಕಟ್ಟಲು ಸೂಕ್ತವಾಗಿದೆ. ಜೊತೆಗೆ ಇತನ ತೂಕ 4720 ಕೆಜಿ, ಎತ್ತರ 2.72 ಮೀಟರ್, ಉದ್ದ 3.51 ಮೀಟರ್ ಇರುವ ಕಾರಣ ಜವಾಬ್ದಾರಿಯಾಗಿ ಅಭಿಮನ್ಯು ಅಂಬಾರಿಯನ್ನು ಹೊರಬಲ್ಲ ಎಂದು ಆಯ್ಕೆ ಮಾಡಲಾಗಿತ್ತು. ಅಧಿಕಾರಿಗಳ ನಿರೀಕ್ಷೆಯಂತೆ ಕಳೆದ ಬಾರಿ ಸಮರ್ಥವಾಗಿ ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದನು. ಇದನ್ನೂ ಓದಿ: ಪಟಾಕಿ, ವಾದ್ಯದ ಸದ್ದಿಗೆ ಬೆದರಿದ ಆನೆ – ಜಂಬೂ ಸವಾರಿ ಮೆರವಣಿಗೆ ಸ್ಥಗಿತ
Advertisement
Advertisement
ಬಹುತೇಕ ಜನರು ಅಭಿಮನ್ಯು ಎಲ್ಲಾ ಆನೆಗಳ ರೀತಿ ದಸರಾ ಆನೆ, ದಸರಾ ಮುಗಿದ ಬಳಿಕ ಈತ ಕಾಡಿನಲ್ಲಿ ಫುಲ್ ರೆಸ್ಟ್ ಮಾಡುತ್ತಾನೆ ಎಂದು ಎಲ್ಲರು ತಿಳಿದುಕೊಂಡಿದ್ದಾರೆ. ಆದ್ರೆ ಇತನಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ. ಎಷ್ಟು ಹೆಸರಿದೆಯೋ ಅಷ್ಟೇ ಹೆಸರು ಕೂಂಬಿಂಗ್‍ನಲ್ಲೂ ಇದೆ. ಈ ಕಾರಣಕ್ಕೆ ಅಭಿಮನ್ಯುವನ್ನು ಕೂಂಬಿಂಗ್ ಸ್ಪೆಷಲಿಸ್ಟ್ ಎಂದು ಕರೆಯುತ್ತಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡಿನಿಂದಬಂದು ಉಪಟಳ ಮಾಡುವ ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗೆ ಅಭಿಮನ್ಯುವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಾಕಾನೆಗಳಿಗೆ ತುಂಬಾ ಧೈರ್ಯ ಬೇಕಾಗಿದೆ. ಅಭಿಮನ್ಯು ಯಾವುದಕ್ಕೂ ಭಯಪಡದೇ ಧೈರ್ಯದಿಂದ ನುಗ್ಗುವ ಕಾರಣಕ್ಕೆ ಇತನನ್ನು ಕೂಂಬಿಂಗ್‍ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 150 ಕ್ಕೂ ಹೆಚ್ಚು ಕಾಡಾನೆಗಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅಭಿಮನ್ಯು ಆ ಕಾಡಾನೆಗಳ ಪುಂಡಾಟವನ್ನು ಸದ್ದಿಲ್ಲಂದೆ ಅಡಗಿಸಿದ್ದಾನೆ. ಇನ್ನೂ ಇತ ಹೆಸರಿನಲ್ಲಿ 50ಕ್ಕೂ ಹೆಚ್ಚು ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಹೆಗ್ಗಳಿಕೆಯೂ ಸಹ ಇರುವುದು ಗಮನಾರ್ಹವಾಗಿದೆ. ಇದನ್ನೂ ಓದಿ: ದಸರಾ ಆನೆ ವಿಕ್ರಮನಿಗೆ ಮದ – ಈ ಬಾರಿ ದಸರಾದಿಂದ ವಿಕ್ರಮ ಔಟ್
Advertisement
ಒಟ್ಟಾರೆ ಕಳೆದ ವರ್ಷದಿಂದ ಯಶಸ್ಸಿಯಾಗಿ ಅಂಬಾರಿ ಹೊರುತ್ತಿರುವ ಅಭಿಮನ್ಯು ಮಾಡಿರು ಸಾಹಸ ಪರಾಕ್ರಮದಿಂದ ಇತನಿಗೆ ಕೂಂಬಿಂಗ್ ಸ್ಪೇಷಲಿಸ್ಟ್ ಎಂಬ ಬಿರುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಅಭಿಮನ್ಯು ಇನ್ನಷ್ಟು ವರ್ಷಗಳ ಕಾಲ ಜಂಬೂ ಸವಾರಿಯ ಕ್ಯಾಪ್ಟನ್ ಶೀಪ್ ವಹಿಸಿಕೊಳ್ಳುವುದರ ಜೊತೆಗೆ ಇತನ ಈ ಯಶಸ್ವಿ ಕೂಂಬಿಂಗ್ ಜರ್ನಿಯನ್ನು ಮುಂದುವರೆಯಲಿ ಎನ್ನುವುದೇ ನಮ್ಮ ಆಶಯವಾಗಿದೆ.