ಮಂಡ್ಯದ ಗಂಡು ಅಂಬರೀಶ್ (Ambarish) ಅವರ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಹಾಗೂ ಅಂಬಿ ಕುಟುಂಬದ ಭಾವಿ ಸೊಸೆ ಅವಿದಾ ಬಿಡಪ (Aviva Biddappa). ಅಂಬಿ ಹುಟ್ಟು ಹಬ್ಬದ ದಿನದಂದು ಆ ಸ್ಪೆಷಲ್ ವಿಡಿಯೋವನ್ನು (Video) ಬಿಡುಗಡೆ ಮಾಡಿದ್ದು, ಒಟ್ಟು ನಾಲ್ಕು ಹಾಡುಗಳ ತುಣುಕಿಗೆ ಈ ಜೋಡಿ ಡಾನ್ಸ್ (Dance) ಮಾಡಿದೆ.
ಅಂಬರೀಶ್ ಅವರ ಸಿನಿಮಾದ ಜನಪ್ರಿಯ ಗೀತೆಗಳಾದ ‘ಒಲವಿನ ಉಡುಗೊರೆ’, ‘ಚಳಿ ಚಳಿ ತಾಳೆನು ಈ ಚಳಿಯ’, ‘ಮಂಡ್ಯದ ಗಂಡು’ ಹಾಗೂ ‘ಹೇ ಜಲೀಲಾ, ಕನ್ವರ್ ಲಾಲಾ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಾಲ್ಕು ಗೀತೆಗಳಿಗೆ ಅಭಿ ಮತ್ತು ಅವಿವಾ ಜೋಡಿ ಹೆಜ್ಜೆ ಹಾಕಿದೆ. ಒಲವಿನ ಉಡುಗೊರೆಯಿಂದ ಶುರುವಾಗುವ ವಿಡಿಯೋ ಅಂಬಿ ಅವರ ಕೊನೆಯ ಸಿನಿಮಾದ ಹೇ ಜಲೀಲ ಹಾಡಿನ ಮೂಲಕ ಕೊನೆಗೊಳ್ಳುತ್ತದೆ.
ಒಲವಿನ ಉಡುಗೊರೆ ಹಾಡಿನಲ್ಲಂತೂ ಯಂಗ್ ರೆಬಲ್ ಸ್ಟಾರ್ ಸಖತ್ ಆಗಿ ಕಾಣುತ್ತಾರೆ. ಚಳಿ ಚಳಿ ತಾಳೆನು ಹಾಡಿಗೆ ಅವಿವಾ ಸಖತ್ ಎಕ್ಸ್ ಪ್ರೆಷನ್ ನೀಡಿದ್ದಾರೆ. ಮಂಡ್ಯದ ಗಂಡು ಹಾಡಿಗೆ ಬುಲೆಟ್ ಏರಿ ಬರುವ ಅಭಿಷೇಕ್, ಜಲೀಲ ಹಾಡಿಗೆ ಥೇಟ್ ಅಪ್ಪನಂತೆಯೇ ಸ್ಟೆಪ್ ಹಾಕಿದ್ದಾರೆ. ಎರಡು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವಿವಾ, ಎರಡರಲ್ಲೂ ಸೂಪರ್ ಆಗಿ ಕಾಣುತ್ತಾರೆ.
ಕೆ.ಆರ್.ಜಿ ಕನೆಕ್ಟ್ಸ್ ವಿಶೇಷವಾಗಿ ಈ ವಿಡಿಯೋವನ್ನು ತಯಾರಿಸಿದ್ದು, ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ ಅದನ್ನು ಉಡುಗೊರೆಯಾಗಿ ನೀಡಿದೆ. ಜೊತೆಗೆ ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರರ್ಸ್’ ಸಿನಿಮಾದ ಪ್ರಮೋಷನ್ ಕೂಡ ಈ ವಿಡಿಯೋ ಮೂಲಕ ಮಾಡಿದೆ. ಅಂದಹಾಗೆ ಬ್ಯಾಡ್ ಮ್ಯಾನರ್ಸ್ ಅಭಿ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ. ಈ ಸಿನಿಮಾಗೆ ದುನಿಯಾ ಸೂರಿ ನಿರ್ದೇಶಕ.