ಯಾದಗಿರಿ: ಜಿಲ್ಲೆಯ ಅದೊಂದು ವಸತಿ ಶಾಲೆಯಲ್ಲಿ ಮೇಲಿಂದ ಮೇಲೆ ಎಡವಟ್ಟುಗಳು ನಡೆಯುತ್ತಲೇ ಇವೆ. ಆದ್ರೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಇದೀಗ ಮತ್ತದೇ ವಸತಿ ಶಾಲೆ ಮಕ್ಕಳು ಕ್ರೂಸರ್ ಟಾಪ್ ಮೇಲೆ ಕುಂತು ಡೇಂಜರ್ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬಾಲಚೇಡ್ ಗ್ರಾಮದಲ್ಲಿರುವ ಎಪಿಜೆ ಅಬ್ದುಲ್ ಕಾಲಂ ವಸತಿ ಶಾಲೆಯಲ್ಲಿ (Abdul Kalam Residential School Yadagiri) ಈ ಎಡವಟ್ಟು ನಡೆದಿದೆ. ವಿದ್ಯಾರ್ಥಿಗಳನ್ನ ಪರೀಕ್ಷೆಗೆಂದು ಜಿಲ್ಲೆಯ ಶಹಾಪುರಕ್ಕೆ ಕರೆದುಕೊಂಡು ಹೋಗುವಾಗ ಪ್ರಾಂಶುಪಾಲ ಸಂತೋಷ್ ಮಾಡಿರೋ ಎಡವಟ್ಟಿದು. ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಕರೆದುಕೊಂಡು ಹೋಗಲು ಎಲ್ಲಾ ಸೌಲಭ್ಯ ಇದೆ. ಆದರೂ ಈ ಪ್ರಾಂಶುಪಾಲರು ಮಾತ್ರ ಕ್ರೂಸರ್ ವಾಹನದ ಟಾಪ್ ಮೇಲೆ ಕುರಿಗಳನ್ನ ತುಂಬಿದಂತೆ ತುಂಬಿ ಪರೀಕ್ಷೆ ಬರೆಯಲು ಕರೆದುಕೊಂಡು ಹೋಗಿದ್ದಾರೆ.
- Advertisement -
- Advertisement -
ಈ ವಸತಿ ಶಾಲೆಯ ಎಡವಟ್ಟು ಇದೇ ಮೊದಲಲ್ಲ. ಕಳೆದ ಎರಡು ತಿಂಗಳ ಹಿಂದೆ ಇದೇ ವಸತಿ ಶಾಲೆಯಲ್ಲಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿತ್ತು. ಕಲುಷಿತ ನೀರು ಹಾಗೂ ವಸತಿ ಶಾಲೆಯಲ್ಲಿ ಶುಚಿತ್ವ ಇಲ್ಲದೇ ಇದ್ದಿದ್ರಿಂದ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳಿಗೆ ಮೈತುಂಬಾ ಗುಳ್ಳೆಗಳು ಕಾಣಿಸಿಕೊಂಡಿತ್ತು. ಇಲ್ಲೂ ನಿರ್ಲಕ್ಷ್ಯ ಮಾಡಿದ್ದ ಪ್ರಾಂಶುಪಾಲ ಸಂತೋಷ್, ಮಕ್ಕಳ ಪೋಷಕರಿಗೆ ಯಾವುದೇ ಮಾಹಿತಿ ನೀಡಿದೇ ಮಕ್ಕಳ ಆರೋಗ್ಯದ ಬಗ್ಗೆ ಸಂಪೂರ್ಣ ಕಡೆಗಣಿಸಿದ್ದ. ಮಕ್ಕಳ ಆಯೋಗದವರು ಆ ವೇಳೆ ವಸತಿ ಶಾಲೆಗೆ ಭೇಟಿ ನೀಡಿ, ಛೀಮಾರಿ ಹಾಕಿದ್ರು.
- Advertisement -
ಮಕ್ಕಳ ಜೀವದ ಬಗ್ಗೆ ಯಾವುದೇ ಕಾಳಜಿ ಇಲ್ಲದೇ ಚೆಲ್ಲಾಟ ಆಡ್ತಿರೋ ಪ್ರಾಂಶುಪಾಲರ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡು, ಜಿಲ್ಲೆಯಲ್ಲಿ ಮತ್ತೊಮ್ಮೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.