ಬೆಂಗಳೂರು: ನಾವು ನಾಯಿಯನ್ನೇ ಮುಟ್ಟಲ್ಲ, ನಾಯಿ ಸ್ವಲ್ಪ ಟಚ್ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ. ಸ್ನಾನ ಮಾಡಿಕೊಂಡು ಹೋಗ್ತೀವಿ ಅಂತಹದ್ದರಲ್ಲಿ ನಾಯಿ ಮಾಂಸ (Dog Meat) ತಂದು ತಿನ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ (Abdul Razak) ಆಕ್ರೋಶ ಹೊರಹಾಕಿದ್ದಾರೆ.
Advertisement
ರಾಜಸ್ಥಾನದ ಜೈಪುರದಿಂದ (Rajasthan Jaipur) ಬೆಂಗಳೂರಿಗೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ತರಲಾಗಿದೆ. ಜೊತೆಗೆ ಬೆಂಗಳೂರಿನ ಹೋಟೆಲ್‌ಗಳಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್ – ಬಸ್ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ
Advertisement
Advertisement
ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 10-12 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅನ್ನುತ್ತಿದ್ದಾರೆ. ಈ ವ್ಯವಹಾರವನ್ನ ನಂಬಿಕೊಂಡು ಸಾವಿರಾರು ಜನ ಜೀವನ ನಡೆಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ರೋಲ್‌ಕಾಲ್ ಸಿಗಲಿಲ್ಲ ಅಂತ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿ ಶಾಸಕರಿಗೆ ಅನುದಾನ ಕೊಟ್ಟಿಲ್ಲ: ಎಸ್.ಆರ್.ವಿಶ್ವನಾಥ್
Advertisement
ಶಶಿ, ರಿಜ್ವಾನ್, ಹಿಲಾಲ್ ಅನ್ನುವವರು ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಹಿಂದೆ ಬಿದ್ದಿದ್ದರು. ಮಾಂಸ ಸಾಗಿಸುತ್ತಿರುವ ವಿಚಾರವನ್ನ ಪುನೀತ್ ಕೆರೆಹಳ್ಳಿಗೆ ತಿಳಿಸಿ, ರೋಲ್‌ಕಾಲ್ ಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ನಾನು ಕಳೆದ ಜೂನ್ 26ರಂದೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ, ಎನ್‌ಸಿಆರ್ ಕೂಡ ಆಗಿದೆ. ನಮಗೆ ಹಿಂಸೆ ಕೊಡ್ತಿದ್ದಾರೆ ಅಂತಾ ಪೊಲೀಸರಿಗೆ ದೂರಿನ ಮೂಲಕ ತಿಳಿಸಿದ್ದೆ. ನಾವು ರೋಲ್‌ಕಾಲ್‌ಗೆ ಆಸ್ಪದ ನೀಡದೇ ಇದ್ದಿದ್ದರಿಂದ ಕುರಿ ಮಾಂಸವನ್ನು ನಾಯಿ ಮಾಂಸ ಅಂತ ಸುಳ್ಳು ಹಬ್ಬಿಸಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ – ಆಹಾರ ಸುರಕ್ಷತಾ ಅಧಿಕಾರಿಗಳಿಂದ ಸ್ಯಾಂಪಲ್ಸ್ ಸಂಗ್ರಹ
ಬೆಂಗಳೂರಲ್ಲಿ ಸುಮಾರು 2 ಕೋಟಿ ಜನ ವಾಸ ಮಾಡ್ತಿದ್ದಾರೆ. ನಮ್ಮ ಬಳಿಕ 2 ಸ್ಲಾಟ್‌ಗಳಿವೆ. ಸುಮಾರು 3 ಸಾವಿರ ಛತ್ರಗಳಿಗೆ ಪ್ರತಿದಿನ ಮಾಂಸ ಬೇಕು. ನಾವು ಎಷ್ಟು ಪೂರೈಸಿದರೂ ಸಾಕಾಗಲ್ಲ. ಅದಕ್ಕಾಗಿ ರಾಜಸ್ಥಾನದ ಜೈಪುರದಿಂದ ಮಾಂಸ ತರಿಸುತ್ತಿದ್ದೇವೆ. ಅಲ್ಲಿನ ಕುರಿಗಳಿಗೆ ಬಾಲ ಉದ್ದವಾಗಿಯೇ ಇರುತ್ತದೆ. ನಾವು ನಾಯಿಯನ್ನೇ ಮುಟ್ಟಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಾಯಿ ಟಚ್ ಆದ್ರೂ ಮಸೀದಿ ಒಳಕ್ಕೇ ಹೋಗಲ್ಲ. ಸ್ನಾನ ಮಾಡಿ, ಬಟ್ಟೆ ಬದಲಿಸಿ ಆಮೇಲೆ ಮಸೀದಿಗೆ ಹೋಗ್ತೀವಿ. ಅಂತಹದ್ದರಲ್ಲಿ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ವ್ಯವಹಾರವನ್ನು ಸುಮಾರು 20 ಜನ ನಿರ್ವಹಿಸುತ್ತಿದ್ದಾರೆ. ನಾನು ಡಿಸ್ಟ್ರಿಬ್ಯೂಟರ್ ಬರುವ ಮಾಂಸವನ್ನ ನಾನು ಆಯಾ ಮಾಲೀಕರಿಗೆ ಡಿಸ್ಟ್ರಿಬ್ಯೂಟ್ ಮಾಡ್ತೀನಿ. ರಾಜಸ್ಥಾನದಿಂದ ತರಿಸಿದ್ದ ಮಾಂಸವನ್ನ ಸಂಪೂರ್ಣ ಐಸ್‌ನಲ್ಲಿ ಇಡಲಾಗಿತ್ತು. ಆದ್ರೆ ರೋಲ್‌ಕಾಲ್ ಸಿಗಲಿಲ್ಲ ಅಂತ ಇಲ್ಲಿ ಬಂದು ಗಲಾಟೆ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಅಧಿಕಾರಿಯೂ ಅಲ್ಲ. ಈಗ ಅಧಿಕಾರಿಗಳು ಕೇಳಿದ ಪ್ರಶ್ನೆಗೆಲ್ಲಾ ಉತ್ತರ ಕೊಟ್ಟಿದ್ದೇವೆ. ಅಗತ್ಯ ದಾಖಲಾತಿಗಳನ್ನೂ ತೋರಿಸಿದ್ದೇವೆ. ಲ್ಯಾಬ್ ವರದಿ ಬಂದ ಬಳಿಕ ಪುನೀತ್ ಕೆರೆಹಳ್ಳಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.