ಮೈಸೂರು: ಸಿಎಂ ಇಬ್ರಾಹಿಂ ಸ್ವಾಗತಿಸಿದ್ದ ತನ್ವೀರ್ ಆಪ್ತನಿಗೆ ಕಾಂಗ್ರೆಸ್ ಗೇಟ್‍ಪಾಸ್ ನೀಡಿದೆ.
ಶಾಸಕ ತನ್ವೀರ್ ಆಪ್ತ ಅಬ್ದುಲ್ ಖಾದರ್ ಶಾಹೀದ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಶಾಹಿದ್ ಅವರು ಈ ಹಿಂದೆ ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಈಗ ಸಿಎಂ ಇಬ್ರಾಹಿಂ ಸ್ವಾಗತಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆಗೊಂಡರು. ಸಿಎಂ ಇಬ್ರಾಹಿಂರನ್ನ ಸ್ವಾಗತಿಸಿ ಎನ್.ಆರ್ ಕ್ಷೇತ್ರದಲ್ಲಿ ಸಭೆ ನಡೆಸಿದ್ದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಪಕ್ಷದಿಂದ ಉಚ್ಛಾಟಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಆದೇಶ ಹೊರಡಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮತ್ತು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಕ್ರಮ ಕೂಗೊಳ್ಳಲಾಗುತ್ತಿದೆ. ಸದ್ಯ ಶಾಹಿದ್ ಉಚ್ಛಾಟನೆ ತನ್ವೀರ್ ಗೆ ತೀವ್ರ ಮುಜುಗರ ತಂದೊಡ್ಡಿದೆ. ಇದನ್ನೂ ಓದಿ: ಹಿಜಾಬ್ ವಿವಾದವು ಕಾಂಗ್ರೆಸ್‍ನ ಗಿಮಿಕ್: ದುರ್ಯೋಧನ ಐಹೊಳೆ