ಉಡುಪಿ: ನಗರದ ಸುತ್ತಮುತ್ತ ಹೆಣ್ಣುಮಕ್ಕಳು ಒಬ್ಬಂಟಿಯಾಗಿದ್ದಾರೆ ಅಂತ ಕೆಣಕಲು ಹೋದರೆ ಸ್ಥಳದಲ್ಲಿಯೇ ನಿಮ್ಮ ಮೇಲೆ ಕೇಸ್ ದಾಖಲಾಗುತ್ತದೆ. ಉಡುಪಿ ಜಿಲ್ಲೆಗೆ ನಿಶಾ ಜೇಮ್ಸ್ ಎಸ್‍ಪಿ ಆಗಿ ಬಂದ ಮೇಲೆ ಮಹಿಳಾ ಪೊಲೀಸರ ಒಂದು ತಂಡವನ್ನು ಕಟ್ಟಿದ್ದಾರೆ. ಆ ಟೀಂ ಹೆಸರು ಅಬ್ಬಕ್ಕ ಪಡೆ. ಈ ತಂಡದಲ್ಲಿ ಮಹಿಳಾ ಎಸ್‍ಐ, ಪೇದೆ ಇರುತ್ತಾರೆ. ಈ ಪಡೆಯ ಪೊಲೀಸರು ಜನ ನಿಬಿಡ ಪ್ರದೇಶದಲ್ಲಿ ಓಡಾಡುತ್ತಿರುತ್ತಾರೆ.
Advertisement
ಸಮಾವೇಶಗಳು- ಸಾರ್ವಜನಿಕ ಸಭೆಗಳು ನಡೆಯುವಲ್ಲಿ ಈ ಅಬ್ಬಕ್ಕ ಪಡೆ ಮಹಿಳೆಯ ರಕ್ಷಣೆಗೆ ಹಾಜರಿರುತ್ತದೆ. ಬೆಳಗ್ಗೆ ಸಂಜೆ ಬಸ್ ನಿಲ್ದಾಣ- ಮಾರುಕಟ್ಟೆ ಪ್ರದೇಶಗಳಲ್ಲಿ ಈ ಟೀಂ ಓಡಾಡುತ್ತಿರುತ್ತದೆ. ಚಾಲಕ ಒಬ್ಬ ಬಿಟ್ಟು ಅಬ್ಬಕ್ಕ ಪಡೆಯಲ್ಲಿ ಎಲ್ಲ ಮಹಿಳೆಯರೇ ಇದ್ದಾರೆ. ತಂಡಕ್ಕೊಂದು ಗಸ್ತು ವಾಹನ ಕೊಡಲಾಗಿದೆ.
Advertisement
ಚಿತ್ರದುರ್ಗದಲ್ಲಿ ಓಬವ್ವ ಪಡೆ, ಸಾಗರದಲ್ಲಿ ಕೆಳದಿ ಚೆನ್ನಮ್ಮ ಪಡೆಯನ್ನು ರಚನೆ ಮಾಡಲಾಗಿತ್ತು. ಮಹಿಳೆಯರಿಗೆ ತೊಂದರೆ ಕೊಡುವ ಘಟನೆ ನಡೆದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಪಿಎಸ್‍ಐ, ಎಎಸ್‍ಐ, ಮಹಿಳಾ ಸ್ಟಾಫ್ ತಂಡದಲ್ಲಿ ಇರುತ್ತಾರೆ. ಕ್ರಿಮಿನಲ್ ಚಟುವಟಿಕೆ ನಡೆದರೆ ಸ್ಥಳದಲ್ಲೇ ಕೇಸ್ ದಾಖಲಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ ಎಂದು ಎಸ್‍ಪಿ ನಿಶಾ ಜೇಮ್ಸ್ ಹೇಳಿದ್ದಾರೆ.