ಚೆನ್ನೈ: ಹೆಣ್ಣುಮಗುವನ್ನು ಕಸದ ತೊಟ್ಟಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪೋಷಕರು ಬಿಟ್ಟು ಹೋಗಿರುವ ಘಟನೆ ವೆಲ್ಲೂರಿನಲ್ಲಿ ನಡೆದಿದೆ.
ಮಗು ಅಳುತ್ತಿರುವ ಶಬ್ದವನ್ನು ಕೇಳಿ ಸ್ಥಳೀಯರು ಕಸದ ತೊಟ್ಟಿಯನ್ನು ಪರಿಶೀಲಿಸಿದಾಗ ಕಸದ ರಾಶಿಯ ಮಧ್ಯೆ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ವೆಲ್ಲೂರು ಉತ್ತರ ಠಾಣೆಯ ಪೊಲೀಸರಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಗು ಪತ್ತೆಯಾದ ಸ್ಥಳದ ಪಕ್ಕದಲ್ಲಿ ಬಟ್ಟೆಗಳಿರುವ ಸಣ್ಣ ಬ್ಯಾಗ್ ಕಂಡು ಬಂದಿದೆ. ಇದೀಗ ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಾಥಮಿಕ ತನಿಖೆ ವೇಳೆ ಮಗುವಿಗೆ ಕೇವಲ ಎರಡ್ಮೂರು ದಿನವಾಗಿರಬಹುದು ಎಂದು ಶಂಕಿಸಲಾಗಿದ್ದು, ಇದೀಗ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದದ್ದಾರೆ ಹಾಗೂ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದೇ ರೀತಿ ಇತ್ತೀಚೆಗಷ್ಟೇ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಮಾರಿಷಸ್‍ನಲ್ಲಿ ನಡೆದಿತ್ತು. ಏರ್‍ಮರಿಷಸ್ ಏರ್‌ಬಸ್ 330-900 ವಿಮಾನವನ್ನು ತಪಾಸಣೆ ನಡೆಸುವ ವೇಳೆ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಸಂಬಂಧ ಮಡಗಾಸ್ಕರ್‌ನ ಮಹಿಳೆಯನ್ನು(20) ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ
ಬಂಧಿತ ಮಹಿಳೆ ನಾನು ಆ ಮಗವಿಗೆ ಜನ್ಮನೀಡಿಲ್ಲ ಎಂದು ವಾದಿಸುತ್ತಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆ ಮಾಡಲು ಮುಂದಾಗಿದ್ದರು. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮದ ಪ್ರಕಾರ 28 ವಾರದ ಬಳಿಕ ಗರ್ಭಿಣಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲದ ಕಾರಣ ಮಹಿಳೆ ಸುಳ್ಳು ಹೇಳಿರುವುದಾಗಿ ತಿಳಿಸಿ ಮಗು ತನ್ನದೇ ಎಂದು ಒಪ್ಪಿಕೊಂಡಳು. ನಂತ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.