ಹುಬ್ಬಳ್ಳಿ: ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎನ್ನುವ ಚರ್ಚೆಯನ್ನು ಕೈಬಿಟ್ಟು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡುವತ್ತ ಗಮನ ಹರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
Advertisement
ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿರುವ ಅವರು, ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ವಿಚಾರವಾಗಿ ರಾಜ್ಯ ನಾಯಕರ ಕಿವಿ ಹಿಂಡಿದ್ದಾರೆ. ಹೈಕಮಾಂಡ್ ಈ ಬಗ್ಗೆ ಕಠಿಣ ನಿರ್ದೇಶನ ನೀಡಿದ್ದು, ಮುಂದೆ ಈ ಬಗೆಯ ಚರ್ಚೆಗಳು ರಾಜ್ಯದಲ್ಲಿ ನಡೆಯಬಾರದು ಎಂದು ತಿಳಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪಸ್ಥಿತಿ ಇರುವ ಈ ಸಭೆಯಲ್ಲಿ ನಾಯಕತ್ವ ವಿಚಾರದಲ್ಲಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು
Advertisement
ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಾವು ಒಂದೇ ಧ್ವನಿಯಲ್ಲಿ ಹೋರಾಡಬೇಕು. 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಪಕ್ಷದಿಂದ ಆಯ್ಕೆಯಾದ ಶಾಸಕರು ಪಕ್ಷದಲ್ಲಿನ ನಾಯಕತ್ವದ ಸಮಸ್ಯೆಯನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಆಯೋಜಿಸಿದೆ. ಕರ್ನಾಟಕ ಮತ್ತು ಕಾಂಗ್ರೆಸ್‍ನಲ್ಲಿ ಅವರನ್ನು ಮಾಸ್ ಲೀಡರ್ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ಸಮಾರಂಭದಲ್ಲಿ ಉದ್ಭವಿಸಬಹುದಾದ ಆಂತರಿಕ ಕಲಹಗಳನ್ನು ತಡೆಯಲು ಹೈಕಮಾಂಡ್ ಅದಕ್ಕೂ ಮೊದಲು ಪಿಎಸಿ ಸಭೆ ನಡೆಸಿತ್ತು ಎಂದಿದ್ದಾರೆ.