ಚೆನ್ನೈ: ನನ್ನ ಜೆರ್ಸಿ ಸಂಖ್ಯೆ 17 (Jersey No.17), ಇದು 17ನೇ ಆವೃತ್ತಿ. ಖಂಡಿತಾ ಈ ಸಲ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ (AB De Villiers) ಭವಿಷ್ಯ ನುಡಿದರು.
ಐಪಿಎಲ್ (IPL 2024) ಉದ್ಘಾಟನೆ ವೇಳೆ ಪ್ರಿಡಿಕ್ಷನ್ ಬಾಕ್ಸ್‌ನಲ್ಲಿ ಮಾತನಾಡಿದ ಎಬಿಡಿ, ಈ ಸಲ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು – ಶ್ರವಣದೋಷಿತರಿಗಾಗಿ ಸಂಕೇತ ಭಾಷೆಯಲ್ಲಿ ಕಾಮೆಂಟ್ರಿ!
- Advertisement -
- Advertisement -
ಧೋನಿ ದೊಡ್ಡ ತಪ್ಪು ಮಾಡಿದ್ರು:
ಮುಂದುವರಿದು ಮಾತನಾಡಿದ ಎಬಿಡಿ, ನಾನು ಪ್ರಾಮಾಣಿಕವಾಗಿ ಹೇಳ್ತೀನಿ, ಎಂ.ಎಸ್ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿದು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: IPL 2024: ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿನ್ನರ್ಸ್ ಲಿಸ್ಟ್ – ಶಾನ್ ಮಾರ್ಷ್‌ನಿಂದ ಗಿಲ್ ವರೆಗೆ
- Advertisement -
- Advertisement -
2024ರ ಐಪಿಎಲ್ ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದು, ಋತುರಾಜ್ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದರು. 2019ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಋತುರಾಜ್ ಗಾಯಕ್ವಾಡ್ 52 ಪಂದ್ಯಗಳು 51 ಇನ್ನಿಂಗ್ಸ್‌ಗಳಲ್ಲಿ 1,797 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 14 ಅರ್ಧಶತಕ, 159 ಬೌಂಡರಿ, 73 ಸಿಕ್ಸರ್‌ಗಳನ್ನ ಒಳಗೊಂಡಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ದೊರೆತಿದೆ. ಬಾಲಿವುಡ್ ಖ್ಯಾತ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಹಿನ್ನೆಲೆ ಗಾಯಕ ಸೋನು ನಿಗಂ, ಎ.ಆರ್ ರೆಹಮಾನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: IPL 2024: ಟಾಪ್ ಟು ಬಾಟಮ್ ದಾಖಲೆ ಇರೋದು ಆರ್‌ಸಿಬಿ ಹೆಸರಲ್ಲೇ – ಇದು ಅಭಿಮಾನಿಗಳಿಗೆ ಹೆಗ್ಗಳಿಕೆ
ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸುತ್ತಿವೆ.