Keep walking! ????#PlayBold #ನಮ್ಮRCB #IPL2023 #RCBUnbox pic.twitter.com/U987dqzjGu
— Royal Challengers Bangalore (@RCBTweets) March 26, 2023
ಈ ವೇಳೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಎಬಿಡಿ ವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ನನಗೆ ಇನ್ನು ಮುಂದೆ ಅವಕಾಶವಿಲ್ಲ. ಆದ್ರೆ, ಒಬ್ಬ ಅಭಿಮಾನಿಯಾಗಿ ಆರ್‌ಸಿಬಿ ತಂಡವನ್ನ ಬೆಂಬಲಿಸುತ್ತೇನೆ. ʻಈ ಸಲ ಕಪ್ ನಮ್ದೆʼ ಎಂದು ಅಭಿಮಾನಿಗಳನ್ನ ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಔಟ್ – ಯಾರಿಗೆ ವರ್ಷಕ್ಕೆ ಎಷ್ಟು ಸಂಭಾವನೆ?
ಈ ವೇಳೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಇಷ್ಟಪಡುತ್ತೀರಾ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ, ಎಬಿ ಡಿವಿಲಿಯರ್ಸ್, ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ಗೆ ಮರಳಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: WPLನಲ್ಲಿ ನೋಬಾಲ್ ವಿವಾದ – ಚಾಂಪಿಯನ್ ಪಟ್ಟ ಕೈತಪ್ಪಿಸಿದ ಆ ಒಂದು ಔಟ್
ಆರ್‌ಸಿಬಿ ಅಭಿಮಾನಿಗಳು ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಅಭಿಮಾನಿಗಳು. ಇಲ್ಲಿ ಪಂದ್ಯವನ್ನು ಗೆಲ್ಲುವುದು ಅದ್ಭುತವಾಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಆರ್‌ಸಿಬಿ ತಂಡ ಬಲಿಷ್ಠವಾಗಿದೆ. ಹಾಗಾಗಿ ನನಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ. ಇದರ ಬದಲು ಅಭಿಮಾನಿಯಾಗಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಆರ್‌ಸಿಬಿ ಪರ 156 ಪಂದ್ಯಗಳನ್ನಾಡಿರುವ ಎಬಿಡಿ 4,491 ರನ್ ರನ್ ಸಿಡಿಸಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದೆ.