ನವದೆಹಲಿ: ತಂಡದ ನಾಯಕತ್ವ ವಹಿಸುವಂತೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‍ಎ) ಎಬಿ ಡಿವಿಲಿಯರ್ಸ್ ಅವರಿಗೆ ಮನವಿ ಮಾಡಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಬಿಡಿ, ತನಗೆ ಸಿಎಸ್‍ಎಯಿಂದ ಇದುವರೆಗೂ ಅಂತಹ ಯಾವುದೇ ಮನವಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಬೋರ್ಡ್ ಮನವಿ ಮಾಡಿದೆ ಎಂಬ ಸುದ್ದಿಗಳು ವಾಸ್ತವವಲ್ಲ. ಇಂತಹ ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಎಬಿಡಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ಕಮ್‍ಬ್ಯಾಕ್ ಮಾಡಿ ನಾಯಕತ್ವ ವಹಿಸಿಕೊಳ್ಳುತ್ತಾರಾ ಎಂಬ ಅಭಿಮಾನಿಗಳ ಅನುಮಾನಕ್ಕೆ ತೆರೆದಿದ್ದೆ.
Advertisement
Reports suggesting Cricket SA have asked me to lead the Proteas are just not true. It’s hard to know what to believe these days. Crazy times. Stay safe everyone.
— AB de Villiers (@ABdeVilliers17) April 29, 2020
Advertisement
2018ರಲ್ಲಿ ಅಚ್ಚರಿಯಾಗಿ ನಿವೃತ್ತಿ ಘೋಷಣೆ ಮಾಡಿದ್ದ ಎಬಿಡಿ ಆ ಬಳಿಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಕುರಿತು ಮಾತನಾಡಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆಯೇ ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಿವೃತ್ತಿ ಘೋಷಣೆ ಬಳಿಕ ಟಿ20 ಟೂರ್ನಿಗಳಲ್ಲಿ ಆಡುತ್ತಿದ್ದ ಎಬಿಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ಟೂರ್ನಿಯ ವೇಳೆ ಮತ್ತೆ ಕ್ರಿಕೆಟ್‍ಗೆ ಮರಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.
Advertisement
Advertisement
ಇತ್ತ ತಮ್ಮ ಕಮ್‍ಬ್ಯಾಕ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಎಬಿಡಿ, ಕೊರೊನಾ ಕಾರಣದಿಂದ ಮುಂದಿನ 1 ವರ್ಷದ ಕ್ರಿಕೆಟ್ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದು ನನ್ನ ಕಮ್‍ಬ್ಯಾಕ್ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿರಲು ಪ್ರಮುಖ ಕಾರಣವಾಗಿದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ ಎಂದು ಎಬಿಡಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದ ಎಬಿಡಿ ಕೊನೆಯವರೆಗೂ ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಆಡುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಭಾರತ, ದಕ್ಷಿಣ ಆಫ್ರಿಕಾ ಸಂಯುಕ್ತ ತಂಡವನ್ನು ಆಯ್ಕೆ ಮಾಡಿ ಧೋನಿಗೆ ತಂಡದ ನಾಯಕತ್ವ ಸ್ಥಾನ ನೀಡಿದ್ದರು.