ಕಾಲಿವುಡ್ ಸ್ಟಾರ್ ಹೀರೋ ರವಿ ಮೋಹನ್ (ಜಯಂ ರವಿ) ಮತ್ತು ಅವರ ಪತ್ನಿ ಆರತಿ (Aarthi Ravi) ನಡುವಿನ ವಿಚ್ಛೇದನ (Divorce )ಪ್ರಕರಣ ಭಾರೀ ನಾಟಕೀಯ ತಿರುವು ಪಡೆದುಕೊಂಡಿದೆ. ರಾಜೀ ಸಂಧಾನಕ್ಕಾಗಿ ಅರ್ಜಿ ಸಲ್ಲಿಸಿದ್ದ ಆರತಿ ಇದೀಗ ಪತಿಯಿಂದ 40 ಲಕ್ಷ ರೂ. ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ಜಯಂ ರವಿ (Ravi Mohan) ಪತ್ನಿ ಆರತಿಯಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ತಮಗೆ ಪತ್ನಿ ಜೊತೆ ವಾಸಿಸಲು ಸಾಧ್ಯವೇ ಇಲ್ಲ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಆರತಿ ಸಲ್ಲಿಸಿರುವ ರಾಜಿ ಸಂಧಾನದ ಮನವಿಯನ್ನು ತಿರಸ್ಕರಿಸುವಂತೆ ನ್ಯಾಯಾಲಯಕ್ಕೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದೆಲ್ಲದರ ನಡುವೆ ಪತಿಯಿಂದ 40 ಲಕ್ಷ ರೂ. ಜೀವನಾಂಶ ಬೇಕು ಎಂದು ಮನವಿ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ, ಇತ್ತೀಚೆಗೆ ಪತ್ನಿ ಹಾಗೂ ಆಕೆಯ ಕುಟುಂಬ ನನ್ನನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಬಳಸಿಕೊಂಡಿದ್ದರು ಎಂದು ರವಿ ಆರೋಪಿಸಿದ್ದರು. ಈ ಆರೋಪಕ್ಕೆ ಜೀವನಾಂಶದ ಬೇಡಿಕೆ ಪುಷ್ಠಿ ಕೊಡುತ್ತಿದೆ ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಥಗ್‌ಲೈಫ್‌ಲ್ಲಿ ‘ಶುಗರ್ ಬೇಬಿ’ ತ್ರಿಷಾ ಮಿಂಚಿಂಗ್ – ವಿವಾದಕ್ಕೀಡಾಗುತ್ತಾ ಹಾಡು?
ನ್ಯಾಯಾಲಯವು ಇಬ್ಬರಿಗೂ ತಮ್ಮ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜೂ.12 ಕ್ಕೆ ನಿಗದಿಪಡಿಸಿದೆ.
ಜಯಂ ರವಿ ಹಾಗೂ ಆರತಿ 2009ರಲ್ಲಿ ವಿವಾಹವಾಗಿ, 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗಿದ್ದಾರೆ. ಇಬ್ಬರು ಬೇರ್ಪಡುತ್ತಿರುವುದಾಗಿ ಜಯಂ ರವಿ ಕಳೆದ ವರ್ಷ ಘೋಷಿಸಿದ್ದರು. ಆಗಿನಿಂದಲೂ ಆರತಿ ಅವರು ಈ ಘೋಷಣೆಗೆ ವಿರುದ್ಧವಾಗಿದ್ದಾರೆ. ರವಿ ಅವರು ಏಕಪಕ್ಷೀಯವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ. ಈಗಲೂ ನನ್ನ ಪತಿ ರವಿ ಎಂದೇ ಆರತಿ ಹೇಳಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಆರತಿ ತುಂಬಾ ಭಾವುಕರಾಗಿ, 18 ವರ್ಷಗಳ ಕಾಲ ನನ್ನೊಂದಿಗಿದ್ದ ರವಿ ಈಗ ದೂರ ಸರಿದಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ ಎಂದಿದ್ದರು.
ಆರತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಯಂ ರವಿ, ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನನಗೆ ಆಕೆ ಕಿರುಕುಳ ನೀಡಿದ್ದಳು. ನನಗೆ ನನ್ನದೇಯಾದ ಸ್ವಾತಂತ್ರ್ಯ ಇರಲಿಲ್ಲ. ಅಪ್ಪ-ಅಮ್ಮನನ್ನು ನೋಡಲು ಸಹ ಬಿಡುತ್ತಿರಲಿಲ್ಲ. ಇದರಲ್ಲಿ ಆರತಿ ತಾಯಿಯ ಪಾತ್ರವೂ ಇದೆ. ನನ್ನ ಕಷ್ಟದ ಸಮಯದಲ್ಲಿ ಕೆನಿಶಾ ಬೆಳಕಾಗಿ ಬಂದಳು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ