ಹರಾರೆ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ತಮ್ಮ ದಾಖಲೆಯನ್ನು ಆಸೀಸ್ ಆಟಗಾರ ಆರೋನ್ ಫಿಂಚ್ ಉತ್ತಮ ಪಡಿಸಿಕೊಂಡಿದ್ದಾರೆ.
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ತ್ರಿಕೋನ ಟೂರ್ನಿಯ ಮೂರನೇ ಪಂದ್ಯದಲ್ಲಿ ಸ್ಫೋಟಕ ಆಟ ಪ್ರರ್ಶಿಸಿದ 31 ವರ್ಷದ ಫಿಂಚ್ ಕೇವಲ 76 ಎಸೆಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳ ನೆರವಿನಿಂದ 172 ರನ್ ಗಳಿಸುವ ಮೂಲಕ ದಾಖಲೆ ಬರೆದರು. ಆದರೆ ಪಂದ್ಯದ ಕೊನೆಯಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಔಟಾದರು.
Advertisement
World record score for Aaron Finch????
And it's the first 200-run partnership in T20I cricket!
The Australia openers are creating history! ????#ZIMvAUS LIVE ⬇️https://t.co/lkIdrNtkMx pic.twitter.com/wrIt9Tt9H0
— ICC (@ICC) July 3, 2018
Advertisement
ವಿಶೇಷವಾಗಿ ಪಂದ್ಯದಲ್ಲಿ ಫಿಂಚ್ ಹಾಗೂ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್ ಜೋಡಿ 19.2 ಓವರ್‍ಗಳಲ್ಲಿ 223 ರನ್ ಜೊತೆಯಾಟ ನೀಡುವ ಮೂಲಕ ಟಿ20 ಮಾದರಿಯಲ್ಲಿ ಆಸೀಸ್ ಪರ 200 ಪ್ಲಸ್ ರನ್ ಗಳಿಸಿದ ಜೋಡಿ ಎಂಬ ಇತಿಹಾಸ ಸೃಷ್ಟಿಸಿದರು. ಡಾರ್ಸಿ ಶಾರ್ಟ್ 42 ಎಸೆತಗಳಲ್ಲಿ 46 ಗಳಿಸಿ ಫಿಂಚ್ ಗೆ ಸಾಥ್ ನೀಡಿದರು.
Advertisement
ಟಿ20 ಮಾದರಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರಲ್ಲಿ ಫಿಂಚ್ ಮೊದಲ ಸ್ಥಾನದಲ್ಲಿದ್ದರು. 2013 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಫಿಂಚ್ 156 ಗಳಿಸಿ ದಾಖಲೆ ಬರೆದಿದ್ದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಆಸೀಸ್ 229 ಗಳಿಸಿತ್ತು. ಆಸೀಸ್ ಬೃಹತ್ ಮೊತ್ತ ಬೆನ್ನತ್ತಿದ್ದ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಸೋಲುಂಡಿತು.
Advertisement
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತಗಳಿಸಿದ ಆಟಗಾರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ (ಅಜೇಯ 145 ರನ್), ಎವಿನ್ ಲೆವಿಸ್ (ಅಜೇಯ 125 ರನ್), ಶೇನ್ ವಾಟ್ಸನ್ (ಅಜೇಯ 124 ರನ್) ಗಳಿಸಿ ಕ್ರಮವಾಗಿ 3, 4, 5ನೇ ಸ್ಥಾನ ಪಡೆದಿದ್ದಾರೆ.
Highest individual score in all formats:
Tests – Brian Lara (400*)
ODIs – Rohit Sharma (264)
T20Is – AARON FINCH (172)
FC – Brian Lara (501*)
LA – Alistair Brown (268)
T20s – Chris Gayle (175*)
— Bharath Seervi (@SeerviBharath) July 3, 2018
Aaron Finch #Aus
11 – ODI hundreds
2 – T20I hundreds (incl top two scores in T20I cricket)
0 – Test matches for Australia!#AUSvZIM
— Mohandas Menon (@mohanstatsman) July 3, 2018
Aaron Finch (172) scored 75.11% of Australia's total of 229/2. This is the highest % of team's total scored by any player in a completed innings in International cricket. #ZIMvAUS
— Sampath Bandarupalli (@SampathStats) July 3, 2018