ನವದೆಹಲಿ: ಕೊರೊನಾ ಅವಧಿಯಲ್ಲಿ ಫೋನ್‌ನಲ್ಲಿ ಇರುತ್ತಿದ್ದ ಹಲವು ಅಪ್ಲಿಕೇಶನ್‌ಗಳ ಗುಂಪಿನಲ್ಲಿ ಆರೋಗ್ಯ ಸೇತು ಆಪ್ ಕೂಡಾ ಒಂದಾಗಿತ್ತು. ಕೊರೊನಾ ಸಮಯದಲ್ಲಿ ರೈಲು ಅಥವಾ ವಿಮಾನಗಳಲ್ಲಿ ಪ್ರಯಾಣಿಸಲು ಈ ಅಪ್ಲಿಕೇಶನ್ ಅತ್ಯಗತ್ಯವಾಗಿತ್ತು. ಈ ಅಪ್ಲಿಕೇಶನ್ ಅನ್ನು ತೋರಿಸುವ ಮೂಲಕವೂ, ಕಚೇರಿ, ಸಂಸ್ಥೆಗಳು ಸೇರಿದಂತೆ ನಮಗೆ ಬೇಕಾದ ಸ್ಥಳಕ್ಕೆ ಹೋಗಲು ಅನುಮತಿ ಸಿಗುತ್ತಿತ್ತು.
ಆದರೆ ಕೊರೊನಾ ಕ್ರಮೇಣ ಕಡಿಮೆಯಾದ ನಂತರ ಅಪ್ಲಿಕೇಶನ್ ಬಳಕೆ ಕಡಿಮೆಯಾಯಿತು. ಇದೀಗ ಕೇಂದ್ರ ಸರ್ಕಾರ ಆರೋಗ್ಯ ಸೇತುವಿನ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ನಿಲ್ಲಿಸಿದೆ. ಅಂದರೆ ಇನ್ನು ಮುಂದೆ ಈ ಆಪ್ ಮೂಲಕ ಯಾವುದೇ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
Advertisement
Advertisement
ಈ ಆಪ್‌ನಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ವಿವಿಧ ಮಾಹಿತಿ ಲಭ್ಯವಿತ್ತು. ಇದಲ್ಲದೇ, ಈ ಆಪ್ ಯಾರಾದರೂ ಕೊರೊನಾ ಸೋಂಕಿತ ವ್ಯಕ್ತಿ ಹತ್ತಿರದಲ್ಲಿ ಇದ್ದಾರೋ ಇಲ್ಲವೋ ಎಂದು ತಿಳಿಸುತ್ತದೆ ಎಂದು ಕೇಂದ್ರ ಹೇಳಿಕೊಂಡಿತ್ತು. ಆಪ್‌ನಲ್ಲಿ ಬಳಕೆದಾರರು ಕೊರೊನಾ ರೋಗಲಕ್ಷಣಗಳು ಇದ್ದರೂ ಇಲ್ಲದಿದ್ದರೂ, ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಅಥವಾ ಇಲ್ಲದಿದ್ದರೂ ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು. ಈ ಮೂಲಕ ಆಪ್ ಬಳಕೆದಾರರಿಗೆ ತಾವು ಹೋಗುವ ಪ್ರದೇಶ ಸುರಕ್ಷಿತವಾಗಿದೇಯೇ ಇಲ್ಲವೇ ಎಂಬುದನ್ನು ತಿಳಿಸುತ್ತಿತ್ತು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್ ಸಾಧನೆ – ಪಿವಿ ಸಿಂಧುಗೆ ಚಿನ್ನ
Advertisement
ಆರೋಗ್ಯ ಸೇತು ಇದೀಗ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ಸ್ಥಗಿತಗೊಳಿಸಿರುವುದರಿಂದ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಏಪ್ರಿಲ್ 2020 ರಿಂದ, ಅಪ್ಲಿಕೇಶನ್‌ನ ಬಳಕೆದಾರರಿಂದ ಸಂಗ್ರಹಿಸಲಾದ ಡೇಟಾದ ಸುರಕ್ಷತೆಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
ಇಂಟರ್ನೆಟ್ ಫ್ರೀಡಂ ಫೌಂಡೇಶನ್(ಐಎಫ್‌ಎಫ್) ಆರೋಗ್ಯ ಸೇತು ಅಪ್ಲಿಕೇಶನ್ ಬಗ್ಗೆ ಆರ್‌ಟಿಐ(ಮಾಹಿತಿ ಹಕ್ಕು ಕಾಯ್ದೆ) ಮೂಲಕ ಸರ್ಕಾರದಿಂದ ಮಾಹಿತಿಯನ್ನು ಕೇಳಿದೆ. ಈ ಹಿನ್ನೆಲೆ ಮೇ 10, 2022 ರಿಂದ ಆರೋಗ್ಯ ಸೇತುವಿನ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ಆರೋಗ್ಯ ಸೇತು ತಯಾರಕ ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ) ವಕ್ತಾರರು, ಆರೋಗ್ಯ ಸೇತು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವುದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: 725.7 ಕೋಟಿ ಡೀಲ್ – ಗುಜರಾತ್‌ನ ಫೋರ್ಡ್ ಘಟಕ ಖರೀದಿಸಿದ ಟಾಟಾ
ಕೊರೊನಾ ಹಾವಳಿ ಕಡಿಮೆಯಾದ ನಂತರವೂ ಅನೇಕ ಜನರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ವರ್ಷದ ಏಪ್ರಿಲ್ ಮತ್ತು ಜೂನ್ ನಲ್ಲಿ ಒಟ್ಟು 5 ಲಕ್ಷ ಮಂದಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು 10 ಕೋಟಿಗೂ ಹೆಚ್ಚು ಮಂದಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕೋವಿನ್ ಪೋರ್ಟಲ್ ಅನ್ನು ಆರೋಗ್ಯ ಸೇತು ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಅನೇಕ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಆದರೆ ಅಪ್ಲಿಕೇಶನ್‌ನಲ್ಲಿ ಸಂಗ್ರಹವಾಗಿರುವ ಡೇಟಾ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.