ನವದೆಹಲಿ: ಖಾದಿ ಹಗರಣ ಹೇಳಿಕೆ ಹಿನ್ನೆಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ(VK Saxena) ಅವರು ಕಳುಹಿಸಿದ್ದ ಮಾನನಷ್ಟ ನೋಟಿಸ್ (Defamation Notice)ಅನ್ನು ಆಮ್ ಆದ್ಮಿ ಪಕ್ಷದ(AAP) ಸಂಸದ ಸಂಜಯ್ ಸಿಂಗ್(Sanjay Singh) ಹರಿದು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ನನಗೆ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಿದೆ. ರಾಜ್ಯಸಭೆಯ ಸದಸ್ಯನಾಗಿ ನನಗೆ ಸತ್ಯವನ್ನು ಮಾತನಾಡುವ ಹಕ್ಕಿದೆ. ಕಳ್ಳ, ಭ್ರಷ್ಟರು ಕಳುಹಿಸಿರುವ ಈ ನೋಟಿಸ್‍ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಅವರು ಅಲ್ಲೇ ಆ ನೋಟಿಸ್‍ನ್ನು ಹರಿದು ಹಾಕಿದ್ದಾರೆ. ನೋಟಿಸ್‍ನ್ನು ಹರಿದ ನಂತರ ಮಾತನಾಡಿದ ಅವರು, ನಾನು ಇಂತಹ ನೋಟಿಸ್‍ಗಳನ್ನು 10 ಬಾರಿ ಹರಿದು ಎಸೆಯಬಹುದು ಎಂದರು.
Advertisement
Senior AAP leader & Rajya Sabha Member @SanjayAzadSln addressing an important press conference | LIVE https://t.co/1tRo1dt6Tx
— AAP (@AamAadmiParty) September 7, 2022
Advertisement
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ ಮನೀಶ್ ಸಿಸೋಡಿಯಾ(Manish Sisodia) ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಆ ಬಳಿಕ ಆಪ್‍ನ ಕೆಲ ನಾಯಕರು ಮಾತನಾಡಿ, ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಮಂಗೋಲಿಯಾ ಅಧ್ಯಕ್ಷನಿಂದ ರಾಜನಾಥ್ ಸಿಂಗ್‍ಗೆ ವಿಭಿನ್ನ ಉಡುಗೊರೆ
Advertisement
Advertisement
ಅಷ್ಟೇ ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಆಪ್ ಪಕ್ಷವು ಆರೋಪಗಳನ್ನು ಮಾಡಿದ್ದು, 2015 ರಿಂದ 2022ರ ಆರಂಭದವರೆಗೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಸಕ್ಸೇನಾ ಹಲವಾರು ಅಕ್ರಮಗಳನ್ನು ಮಾಡಿದ್ದಾರೆ. 2016ರಲ್ಲಿ 1400 ಕೋಟಿ ರೂ. ಹಾಗೂ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಕೆ ಸಕ್ಸೇನಾ ಅವರು ಆಪ್ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್, ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಅವರಿಗೆ ಮಾನನಷ್ಟ ನೋಟಿಸ್‍ನ್ನು ಕಳುಹಿಸಿದ್ದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಹೇಗಿದೆ?- 144 ಕ್ಷೇತ್ರಗಳ ಮೇಲೆ ಮೋದಿ ಕಣ್ಣು